ಗುರುವಾರ , ಆಗಸ್ಟ್ 18, 2022
24 °C

ಕಾಮನ್‌ವೆಲ್ತ್ ಗೇಮ್ಸ್: ಜುಲೈ 29ರಿಂದ ಮಹಿಳಾ ಟಿ–20 ಟೂರ್ನಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿ ನಡೆಯಲಿರುವ ಮಹಿಳಾ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯು, 2022ರ ಜುಲೈ 29ರಿಂದ ಆಗಸ್ಟ್ 7ರವರೆಗೆ ನಿಗದಿಯಾಗಿದೆ. ಇಂಗ್ಲೆಂಡ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಪ‍ಂದ್ಯಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಎಂಟು ತಂಡಗಳ ಟೂರ್ನಿಯ ಗುಂಪು ಹಂತದ ‍ಪಂದ್ಯಗಳು ಆಗಸ್ಟ್‌ 4ರವರೆಗೆ ನಡೆಯಲಿವೆ. ಆಗಸ್ಟ್ 6ರಂದು ಸೆಮಿಫೈನಲ್‌ಗಳು ನಿಗದಿಯಾಗಿವೆ.

ಫೈನಲ್‌ ಹಾಗೂ ಕಂಚಿನ ಪದಕ್ಕಾಗಿ ನಡೆಯುವ ಪಂದ್ಯಗಳು ಆಗಸ್ಟ್ 7ರಂದು ನಿಗದಿಯಾಗಿವೆ.

‘ಈಜು ಮತ್ತು ಡೈವಿಂಗ್‌ ಸ್ಪರ್ಧೆಗಳಿಗೆ 11 ದಿನ, ಕ್ರಿಕೆಟ್‌ ಮತ್ತು ಜಿಮ್ನಾಸ್ಟಿಕ್‌ಗಳಿಗೆ ತಲಾ 8 ದಿನ, ಮ್ಯಾರಥಾನ್ ಸೇರಿ ಅಥ್ಲೆಟಿಕ್ಸ್ ಸ್ಪರ್ಧೆಗಳಿಗೆ ಏಳು ದಿನಗಳನ್ನು ನಿಗದಿ ಮಾಡಲಾಗಿದೆ‘ ಎಂದು ಕಾಮನ್‌ವೆಲ್ತ್ ಗೇಮ್ಸ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಪಂದ್ಯಗಳು ನಡೆಯಲಿರುವುದು ಎರಡನೇ ಬಾರಿ ಮಾತ್ರ. 1998ರ ಕ್ವಾಲಾಲಂಪುರ ಕೂಟದಲ್ಲಿ ಪುರುಷರ 50 ಓವರ್‌ಗಳ ಪಂದ್ಯಗಳು ನಡೆದಿದ್ದವು.

ಏಪ್ರಿಲ್ 1ರ ಹೊತ್ತಿಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಆರು ಸ್ಥಾನ ಪಡೆದ ತಂಡಗಳು ಮತ್ತು ಆತಿಥೇಯ ಇಂಗ್ಲೆಂಡ್ ಟೂರ್ನಿಗೆ ನೇರ ಅರ್ಹತೆಯನ್ನು ಪಡೆಯಲಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ನವೆಂಬರ್‌ನಲ್ಲಿ ಪ್ರಕಟಿಸಿತ್ತು.

ಭಾರತ ಮಹಿಳಾ ತಂಡವು ಸದ್ಯ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಮೊದಲೆರಡು ಸ್ಥಾನಗಳಲ್ಲಿವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು