ಶನಿವಾರ, ಜನವರಿ 23, 2021
27 °C

ಬ್ರಿಸ್ಟೆನ್ ಕ್ವಾರಂಟೈನ್ ನಿಯಮ ಸಡಿಲಗೊಳಿಸಲು ಕೋರಿ ಬಿಸಿಸಿಐ ಪತ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯ ನಡೆಯಲಿರುವ ಬ್ರಿಸ್ಟೆನ್‌ನಲ್ಲಿ ಭಾರತ ತಂಡಕ್ಕೆ ಕೋವಿಡ್ –19 ಶಿಷ್ಟಾಚಾರದಲ್ಲಿ ವಿನಾಯಿತಿ ನೀಡಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಪತ್ರ ಬರೆದಿದೆ.

ಜನವರಿ 15ರಿಂದ ಗಾಬಾ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಸಿಡ್ನಿ ಟೆಸ್ಟ್ 11ರಂದು ಮುಗಿಯಲಿದೆ.  ಇಲ್ಲಿರುವ ಕ್ವಾರಂಟೈನ್ ನಿಯಮದ ಪ್ರಕಾರ ಆಟಗಾರರು ಹೋಟೆಲ್ ಕೋಣೆಗಳಿಗೇ ಸೀಮಿತವಾಗಬೇಕು. ಅಭ್ಯಾಸದ ಅವಧಿಯಲ್ಲಿಯೂ ಹೋಟೆಲ್–ಕ್ರೀಡಾಂಗಣ–ಹೋಟೆಲ್ ನಿಯಮವನ್ನುಪಾಲಿಸಬೇಕು. ಈಗಾಗಲೇ ಸಿಡ್ನಿಯಲ್ಲಿ   ಕಟ್ಟುನಿಟ್ಟಿನ  ಶಿಷ್ಟಾಚಾರ ಪಾಲನೆಯನ್ನು ಮಾಡಲಾಗಿದೆ. ಮತ್ತೆ ಬ್ರಿಸ್ಟೆನ್‌ನಲ್ಲಿ ಅದನ್ನು ಮುಂದುವರಿಸಲು ಭಾರತ ತಂಡದಲ್ಲಿ ಕೆಲವರು ಆಕ್ಷೇಪಿಸಿದ್ದರೆನ್ನಲಾಗಿದೆ.

’ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಗೆ ಮಾತುಕತೆ ನಡೆಯುತ್ತಿದೆ. ಔಪಚಾರಿಕವಾಗಿ ಒಂದು ಮನವಿ ಪತ್ರವನ್ನೂ ಬರೆದಿದ್ದೇವೆ‘ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

’ಸರಣಿಯ ಆಯೋಜನೆ ಕುರಿತು ಮಾಡಿಕೊಂಡ ಒಡಂಬಡಿಕೆಯಲ್ಲಿ ಎರಡು ಹಾರ್ಡ್‌ ಕ್ವಾರಂಟೈನ್‌ಗಳು ಇರುವ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ‘ ಎಂದೂ ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು