ಗುರುವಾರ , ಜೂನ್ 24, 2021
22 °C

ಅಫ್ಗಾನಿಸ್ತಾನದ ವಿರುದ್ಧ ಇಂತಹ ಬ್ಯಾಟಿಂಗ್ ನಿರೀಕ್ಷೆ ಇರಲಿಲ್ಲ: ಮಾರ್ಗನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: 'ಮಂಗಳವಾರ ನಮ್ಮ ಪಾಲಿಗೆ ಅವಿಸ್ಮರಣೀಯ ದಿನ. ಬ್ಯಾಟಿಂಗ್‌ ಮಾಡಲು ವಿಕೆಟ್‌ ತುಂಬಾ ಚೆನ್ನಾಗಿತ್ತು. ಇಂತಹ  ಇನಿಂಗ್ಸ್‌ ಆಡುತ್ತೇನೆ ಎಂಬ ನಿರೀಕ್ಷೆ ನನಗೇ ಇರಲಿಲ್ಲ’ ಎಂದು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ಧಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಅವರು ಅಫ್ಗಾನಿಸ್ತಾನದ ವಿರುದ್ಧ ದಾಖಲೆಯ ಶತಕ ಬಾರಿಸಿದ್ದರು. ಕೇವಲ 71 ಎಸೆತಗಳಲ್ಲಿ 148 ರನ್‌ಗಳನ್ನು ಹೊಡೆದಿದ್ದರು. ಅದರಲ್ಲಿ ಅವರು 17 ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ದಾಖಲಿಸಿದ್ದರು. ಅದರಿಂದಾಗಿ ತಂಡವು 50 ಓವರ್‌ಗಳಲ್ಲಿ 397 ರನ್ ಗಳಿಸಿತ್ತು. ಅಫ್ಗಾನಿಸ್ತಾನ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 247 ರನ್‌ ಗಳಿಸಿ ಸೋತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು