ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಜಯದ ಲಯಕ್ಕೆ ಮರಳುವತ್ತ ಚೆನ್ನೈ ಚಿತ್ತ

ಋತುರಾಜ್ ಬಳಗಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ಸವಾಲು ಇಂದು
Published 7 ಏಪ್ರಿಲ್ 2024, 22:59 IST
Last Updated 7 ಏಪ್ರಿಲ್ 2024, 22:59 IST
ಅಕ್ಷರ ಗಾತ್ರ

ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ಹಾದಿಗೆ ಮರಳಲು ತವಕಿಸುತ್ತಿದೆ. ತನ್ನ ತವರಿನಂಗಳದಲ್ಲಿ ಸೋಮವಾರ ನಡೆಯಲಿರುವ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಜಯಿಸುವ ಛಲದಲ್ಲಿದೆ. 

ಋತುರಾಜ್ ಗಾಯಕವಾಡ ನೇತೃತ್ವದ ಚೆನ್ನೈ ತಂಡವು ಕಳೆದ ಎರಡು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದೆ. ಋತುರಾಜ್ ಮತ್ತು ಪ್ರತಿಭಾನ್ವಿತ ಆಟಗಾರ ರಚಿನ್ ರವೀಂದ್ರ ಅವರು ಉತ್ತಮ ಆರಂಭ ನೀಡಬೇಕಿದೆ. ಪವರ್‌ಪ್ಲೇನಲ್ಲಿ ಹೆಚ್ಚು ರನ್ ಗಳಿಸಿದರೆ ಮುಂದಿನ ಹಾದಿ ಸುಲಭವಾಗುತ್ತದೆ.  ಆದರೆ ಈ ವಿಷಯದಲ್ಲಿ ಕಳೆದ ಎರಡೂ ಪಂದ್ಯಗಳಲ್ಲಿ ಈ ಜೋಡಿಯು ಸಫಲವಾಗಿಲ್ಲ. 

ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಅವರು ಸತತವಾಗಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ.  ಈ ಟೂರ್ನಿಯಲ್ಲಿ ಒಟ್ಟು 148 ರನ್‌ ಪೇರಿಸಿದ್ದಾರೆ. 118.91ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ಧಾರೆ. 

ಯುವ ಆಟಗಾರ ಸಮೀರ್ ರಿಜ್ವಿ ಅವರೂ ಹೆಚ್ಚು ರನ್ ಗಳಿಸುತ್ತಿಲ್ಲ. ಬೌಲಿಂಗ್‌ನಲ್ಲಿ ದೀಪಕ್ ಚಾಹರ್, ತುಷಾರ್ ದೇಶಪಾಂಡೆ ಮತ್ತು ಮುಕೇಶ್ ಚೌಧರಿ ಅವರೊಂದಿಗೆ ಸ್ಪಿನ್ನರ್ ಮೋಯಿನ್ ಅಲಿ, ರವೀಂದ್ರ ಜಡೇಜ ಹಾಗೂ ಮಹೀಷ ತೀಕ್ಷಣ ಇದ್ದಾರೆ. ಆದರೆ ಈ ಬೌಲಿಂಗ್ ಪಡೆಗೆ ಕೋಲ್ಕತ್ತದ ಬ್ಯಾಟಿಂಗ್ ಪಡೆಯುವ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ. 

ಆಲ್‌ರೌಂಡರ್ ಸುನಿಲ್ ನಾರಾಯಣ, ಆ್ಯಂಡ್ರೆ ರಸೆಲ್, ವೆಂಕಟೇಶ್‌ ಅಯ್ಯರ್ ಮತ್ತು ಯುವಪ್ರತಿಭೆ ಅಂಗಕ್ರಿಷ್ ರಘುವಂಶಿ ಕಳೆದ ಪಂದ್ಯಗಳಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದ್ದಾರೆ.  ಚೆನ್ನೈ ತಂಡದಲ್ಗಿ  ವೇಗಿ ಮುಸ್ತಫಿಜುರ್ ರೆಹಮಾನ್ ಅವರಿಲ್ಲದಿರುವುದರಿಂದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ವಿಭಿನ್ನ ತಂತ್ರ ಹೆಣೆಯಬೇಕಿದೆ.  ತಂಡದ ನಿಕಟಪೂರ್ವ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಋತುರಾಜ್‌ಗೆ ನೀಡುವ ಸಲಹೆಗಳು ಇಲ್ಲಿ ಮುಖ್ಯವಾಗಲಿವೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಶ್ರೇಯಸ್ ಅಯ್ಯರ್  –ಪಿಟಿಐ ಚಿತ್ರ
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಶ್ರೇಯಸ್ ಅಯ್ಯರ್  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT