ಬೆಂಗಳೂರು: ‘ಅಂಪೈರ್ ನಿರ್ಣಯವೇ ಅಂತಿಮ’ ಎಂಬ ಕಾಲಘಟ್ಟದಿಂದ ‘ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ’ಗೆ ಕ್ರಿಕೆಟ್ ಕ್ಷೇತ್ರ ಈಗ ತಲುಪಿದೆ.

ಈ ದೀರ್ಘ ಪಯಣದಲ್ಲಿ ಆಗಿರುವ ಹಲವಾರು ಬದಲಾವಣೆಗಳಿಗೆ ತೆರೆದುಕೊಳ್ಳುತ್ತ ಕಾಲಕ್ಕೆ ತಕ್ಕಂತೆ ಅಂಪೈರ್ಗಳನ್ನು ಸಜ್ಜುಗೊಳಿಸುವ ನಿರತವಾಗಿರುವ ಕರ್ನಾಟಕ ಅಂಪೈರ್ಸ್ ಕ್ರಿಕೆಟ್ ಸಂಸ್ಥೆ (ಎಸಿಯುಕೆ)ಗೆ ಈಗ 51ನೇ ಜನ್ಮದಿನದ ಸಂಭ್ರಮ. ಭಾರತದ ಕ್ರಿಕೆಟ್ ಕ್ಷೇತ್ರಕ್ಕೆ ದಿಗ್ಗಜ ಆಟಗಾರರು ಮತ್ತು ಆಡಳಿತಗಾರರನ್ನು ನೀಡಿರುವ ಕರ್ನಾಟಕವು ಅಂಪೈರಿಂಗ್ ಕ್ಷೇತ್ರಕ್ಕೂ ಮಹನೀಯರನ್ನು ಕಾಣಿಕೆ ನೀಡಿದೆ.

1974ರಲ್ಲಿ ಕರ್ನಾಟಕ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿ ಜಯಿಸಿದ್ದು ಐತಿಹಾಸಿಕ ಸಾಧನೆ. ಆ ವಿಜಯವು ರಾಜ್ಯದ ಕ್ರಿಕೆಟ್ ಮಗ್ಗುಲು ಬದಲಿಸಿತು. ಹಲವಾರು ಮಹತ್ವದ ಬದಲಾವಣೆಗಳಿಗೆ, ಕ್ರಿಕೆಟ್ ಜನಪ್ರಿಯತೆಯ ಹೆಚ್ಚಳಕ್ಕೆ ಕಾರಣವಾಯಿತು. ದೇಶಿ ಕ್ರಿಕೆಟ್ನಲ್ಲಿ ‘ಅನಭಿಷಿಕ್ತ ದೊರೆ’ಯಂತೆ ಇದ್ದ ಮುಂಬೈ ತಂಡದ ಮೆರೆದಾಟಕ್ಕೆ ಕಡಿವಾಣ ಹಾಕಿದ ಕೀರ್ತಿ ಕರ್ನಾಟಕದ್ದಾಯಿತು. ಈ ವಿಜಯವು ಎಸಿಯುಕೆ ಉದಯಕ್ಕೂ ಕಾರಣವಾಯಿತು.

‘ಕರ್ನಾಟಕ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿ ಜಯಿಸಿತ್ತು. ಯರಪಳ್ಳಿ ಪ್ರಸನ್ನ, ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್, ಸುಧಾಕರ್ ರಾವ್, ಬಿ. ರಘುನಾಥ್, ಬಿ.ಎಸ್. ಚಂದ್ರಶೇಖರ್ ಅವರಿದ್ದ ತಂಡ ಅದು. ತಂಡವನ್ನು ಗೌರವಿಸಬೇಕು ಎಂದು ಆಗ ಅಂಪೈರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಲವರು ನಿರ್ಧರಿಸಿದರು. ಒಂದು ಚಹಾಕೂಟ ಏರ್ಪಡಿಸಿ ಆಟಗಾರರನ್ನು ಗೌರವಿಸಿದರು. ಈ ಸಂದರ್ಭದಲ್ಲಿಯೇ ಅಂಪೈರ್ ಸಂಘಟನೆಯನ್ನು ಏಕೆ ಆರಂಭಿಸಬಾರದು ಎಂಬ ಚರ್ಚೆ ನಡೆಯಿತು. ವಿಕ್ರಂ ರಾಜು, ಸತ್ಯಾಜಿರಾವ್, ಎ.ಎಲ್. ನರಸಿಂಹಯ್ಯ, ಎಚ್.ಆರ್. ಗೋಪಾಲಕೃಷ್ಣ, ಎ.ಆರ್. ಪ್ರಹ್ಲಾದ್ ರಾವ್, ಹನುಮಂತ ರಾವ್ ಮತ್ತು ರಘುನಾಥ್ ರಾವ್ ಅವರ ಆಸಕ್ತಿಯಿಂದ ಸಂಘಟನೆ ಆರಂಭವಾಯಿತು. ಅವರು ಹಾಕಿದ ಅಡಿಪಾಯದ ಮೇಲೆ ಇವತ್ತು ಸಂಸ್ಥೆಯು ಬೆಳೆದುನಿಂತಿದೆ. ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಅಂಪೈರ್ಗಳನ್ನು ಸಿದ್ಧಗೊಳಿಸಿದ ಕೀರ್ತಿ ಈ ಸಂಸ್ಥೆಯದ್ದು. ಇದೀಗ ಸುವರ್ಣ ಸಂಭ್ರಮ ಆಚರಿಸುತ್ತಿದ್ದೇವೆ’ ಎಂದು ಎಸಿಯುಕೆ ಅಧ್ಯಕ್ಷ ಆರ್. ವಿ. ಪ್ರಧಾನಕುಮಾರ್ ಅರಸ್ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಅಂಪೈರಿಂಗ್ ದಿಗ್ಗಜರು: ಕರ್ನಾಟಕದ ಹಲವು ಅಂಪೈರ್ಗಳು ಕ್ರಿಕೆಟ್ನ ಕೆಲವು ಪ್ರಮುಖ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೈ ಟೆಸ್ಟ್ನಲ್ಲಿ ಕಾರ್ಯನಿರ್ವಹಿಸಿದ್ದ ವಿಕ್ರಂರಾಜು, 1999ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಪಾಕಿಸ್ತಾನ ಎದುರಿನ ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸ್ನಲ್ಲಿ ಅನಿಲ್ ಕುಂಬ್ಳೆ ಎಲ್ಲ 10 ವಿಕೆಟ್ ಗಳಿಸಿದ ದಾಖಲೆ ಮಾಡಿದ್ದ ಸಂದರ್ಭದಲ್ಲಿ ಅಂಪೈರ್ ಆಗಿದ್ದವರು ಕರ್ನಾಟಕದ ಎ.ವಿ. ಜಯಪ್ರಕಾಶ್. 2010ರಲ್ಲಿ ಗ್ವಾಲಿಯರ್ನಲ್ಲಿ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನ ಮೊಟ್ಟಮೊದಲ ದ್ವಿಶತಕ ಹೊಡೆದು ವಿಶ್ವದಾಖಲೆ ಬರೆದರು. ಆ ಐತಿಹಾಸಿಕ ಪಂದ್ಯದಲ್ಲಿ ಶಾವೀರ್ ತಾರಾಪುರ್ ಅವರು ಕಾರ್ಯನಿರ್ವಹಿಸಿದ್ದರು. ಕ್ರಿಕೆಟ್ ಕಸ್ಟೋಡಿಯನ್ ಎಂದೇ ಕರೆಯಲಾಗುವ ಮೆರಿಲ್ಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ನಿಯಮಾವಳಿಗಳನ್ನು ಕನ್ನಡದಲ್ಲಿ ಬರೆದವರು ವಿನಾಯಕ ಕುಲಕರ್ಣಿ.

ಇವು ಕೆಲವು ನಿದರ್ಶನಗಳಷ್ಟೇ. ಇತಿಹಾಸದ ಪುಟಗಳಲ್ಲಿ ಕರ್ನಾಟಕದ ಅಂಪೈರ್ಗಳ ಇಂತಹ ಹಲವು ಸಾಧನೆಗಳು ಅಚ್ಚಾಗಿವೆ. ಪ್ರಸ್ತುತ ಈ ಸಂಘದಲ್ಲಿ 550ಕ್ಕೂ ಹೆಚ್ಚು ಅಂಪೈರ್ಗಳಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಕ್ರಿಕೆಟ್ನಲ್ಲಿ ಅಗಾಧ ಬದಲಾವಣೆಗಳಾಗಿವೆ. ಹಳೆ ನಿಯಮಗಳೂ ಪರಿಷ್ಕೃತಗೊಂಡಿವೆ. ಹೊಸ ನಿಯಮಗಳು ಜಾರಿಯಾಗಿವೆ. ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ಇವೆಲ್ಲದರ ಕುರಿತು ಶಿಕ್ಷಣ ನೀಡುವುದೇ ಈ ಸಂಘಟನೆ ಮಾಡುತ್ತಿರುವ ಪ್ರಮುಖ ಕಾರ್ಯ.

‘1988ರಲ್ಲಿ ನಾನು ಅಂಪೈರಿಂಗ್ ಆರಂಭಿಸಿದೆ. ಆಗ ಇದ್ದ ಅನುಭವಿಗಳು ನಮಗೆ ಶಿಸ್ತು, ಸಮಯಪಾಲನೆ ಮತ್ತು ಕ್ರಿಕೆಟ್ ನಿಯಮಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳುವ ತರಬೇತಿ ನೀಡಿದರು. ಪಂದ್ಯಗಳಲ್ಲಿ ಯಾವುದೇ ತಂತ್ರಜ್ಞಾನದ ಸಹಾಯವಿಲ್ಲದೇ ನಿಷ್ಪಕ್ಷಪಾತವಾಗಿ ತೀರ್ಪು ನೀಡುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಆ ಸವಾಲನ್ನು ಸ್ವೀಕರಿಸಿ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದ್ದೇವೆ. ಆಗಿನಿಂದ ಇಲ್ಲಿಯವರೆಗೆ ಈ ಸಂಸ್ಥೆಯ ಸದಸ್ಯನಾಗಿರುವೆ. ಕರ್ನಾಟಕರ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಈ ಸಂಘಟನೆಗೆ ಬಹಳ ಬೆಂಬಲ ನೀಡಿದೆ’ ಎಂದು ಅಂಪೈರ್ ಎಸ್. ಮುರಳೀಧರ್ ‘ಪ್ರಜಾವಾಣಿ’ಗೆ ವಿವರಿಸಿದರು.

ಪ್ರತಿವರ್ಷವೂ ವಿವಿಧ ವಯೋಮಿತಿ, ಶಾಲಾ ಟೂರ್ನಿಗಳು ಸೇರಿದಂತೆ ಸುಮಾರು ಎರಡು ಸಾವಿರ ಪಂದ್ಯಗಳು ರಾಜ್ಯದಲ್ಲಿ ನಡೆಯುತ್ತವೆ. ಅಂಪೈರ್ಗಳಿಗೆ ಕಾರ್ಯನಿರ್ವಹಿಸಲು ಈ ಪಂದ್ಯಗಳು ಅವಕಾಶ ನೀಡುತ್ತವೆ. ಈಗ ವಿಡಿಯೊ ರೆಕಾರ್ಡಿಂಗ್ ಸೌಲಭ್ಯ ಇರುವುದರಿಂದ ಪಂದ್ಯದ ನಂತರ ತಮ್ಮ ಕಾರ್ಯನಿರ್ವಹಣೆಯನ್ನು ಅವಲೋಕಿಸಲು ಮತ್ತು ಲೋಪಗಳನ್ನು ಸುಧಾರಿಸಿಕೊಳ್ಳಲು ಅಂಪೈರ್ಗಳಿಗೆ ಅವಕಾಶಗಳಿವೆ. ಆದರೂ ಅಂಪೈರಿಂಗ್ ಮಾಡುವವರಿಗೆ ಕ್ರಿಕೆಟ್ ಪ್ಲೆಯಿಂಗ್ ಕಂಡಿಷನ್ ಕುರಿತು ತರಗತಿಗಳು ಮತ್ತು ಪರೀಕ್ಷೆಗಳನ್ಣು ನಡೆಸಲಾಗುತ್ತದೆ. ತಂತ್ರಜ್ಞಾನ ಮೂಲಕವೂ ತರಬೇತಿ ನೀಡಿ ಸಿದ್ಧಗೊಳಿಸಲಾಗುತ್ತದೆ.

ಆದರೆ ಕ್ರಿಕೆಟ್ ಕೋಚಿಂಗ್, ವೀಕ್ಷಕ ವಿವರಣೆ, ನೆರವು ಸಿಬ್ಬಂದಿಗಳ ಕಾರ್ಯಗಳಿಗೆ ಮಾಜಿ ಆಟಗಾರರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ ಈ ಕೆಲಸಗಳಿಗೆ ಹೋಲಿಸಿದರೆ, ಅಂಪೈರಿಂಗ್ನಲ್ಲಿ ಹಣ ಮತ್ತು ಹೆಸರು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಕಠಿಣ ಶ್ರಮ ಅಗತ್ಯ ಹಾಗೂ ಒತ್ತಡವೂ ಹೆಚ್ಚು. ಆದ್ದರಿಂದ ಅಂಪೈರಿಂಗ್ಗೆ ಬರುತ್ತಿರುವವರು ಕಡಿಮೆಯಾಗುತ್ತಿದ್ದಾರೆ. ಆದರೆ ‘ಆಸಕ್ತಿಯಿಂದ ಬಂದವರನ್ನು ಉತ್ತಮ ಅಂಪೈರ್ಗಳಾಗುವಂತೆ ಸಿದ್ಧಗೊಳಿಸುವುದೇ ಎಸಿಯುಕೆ ಗುರಿ’ ಎಂಬ ಧ್ಯೇಯದೊಂದಿಗೆ ಭವಿಷ್ಯದತ್ತ ಚಿತ್ತ ನೆಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.