ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಆಕಾಶ್‌ದೀ‍ಪ್‌: ವೇಗಿಯ ದಾಳಿಗೆ ಕುಸಿದ ಆಂಗ್ಲರು

Published 23 ಫೆಬ್ರುವರಿ 2024, 7:45 IST
Last Updated 23 ಫೆಬ್ರುವರಿ 2024, 7:45 IST
ಅಕ್ಷರ ಗಾತ್ರ

ರಾಂಚಿ: ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ವೇಗದ ಬೌಲರ್‌ ಆಕಾಶ್‌ದೀಪ್‌ ಆಂಗ್ಲರಿಗೆ ದುಃಸ್ವಪ್ನವಾಗಿ ಕಾಡಿದರು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಉತ್ತಮ ರನ್ ಪೇರಿಸುವ ನಿರೀಕ್ಷೆ ಮೂಡಿಸಿತ್ತು. ಆಂಗ್ಲರ ಯೋಜನೆಯನ್ನು ಸ್ಥಳೀಯ ಹುಡುಗ ಆಕಾಶ್‌ ತಲೆಕೆಳಗೆ ಮಾಡಿದರು.

ಆರಂಭಿಕ ಬೆನ್‌ ಡಕೆಟ್‌ (11), ಓಲಿ ಪೋಪ್ (0) ಹಾಗೂ ಜಾಕ್ ಕಾರ್ವ್ಲೆ (42) ಅವರನ್ನು ಆಕಾಶ್‌ದೀಪ್ ತಮ್ಮ ಖೆಡ್ಡಾಗೆ ಬೀಳಿಸಿದರು. 24 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು.

ಮೊದಲ ದಿನದ ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡದ ಸ್ಕೋರ್‌ 112 ರನ್‌ಗಳಿಗೆ 5 ವಿಕೆಟ್.

ರವಿಚಂದ್ರನ್ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್ ದುಬಾರಿಯಾದರು.

ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಇದಾಗಿದ್ದು, ಭಾರತ 2–1 ಅಂತರದಿಂದ ಮುನ್ನಡೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT