ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ಗೆ ವಿದಾಯ ಹೇಳಿದ ಹೇಲ್ಸ್

Published 5 ಆಗಸ್ಟ್ 2023, 0:17 IST
Last Updated 5 ಆಗಸ್ಟ್ 2023, 0:17 IST
ಅಕ್ಷರ ಗಾತ್ರ

ಲಂಡನ್ : ಇಂಗ್ಲೆಂಡ್‌ನ ಬ್ಯಾಟರ್‌ ಅಲೆಕ್ಸ್‌ ಹೇಲ್ಸ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶುಕ್ರವಾರ ವಿದಾಯ ಹೇಳಿದರು. 34 ವರ್ಷದ ಬಿರುಸಿನ ಹೊಡೆತಗಳ ಆಟಗಾರ ಹೇಲ್ಸ್‌ 2022ರಲ್ಲಿ ಪಾಕಿಸ್ತಾನ ವಿರುದ್ಧ ಮೆಲ್ಬರ್ನ್‌ನಲ್ಲಿ ಟಿ–20 ಪಂದ್ಯದಲ್ಲಿ ಕೊನೆಯ ಬಾರಿ ಇಂಗ್ಲೆಂಡ್‌ ತಂಡದಲ್ಲಿ ಆಡಿದ್ದರು.

ಅವರಿಂದ ಕೊನೆಯ ಬಾರಿ ಗಮನಾರ್ಹ ಆಟ ಬಂದಿದ್ದು ಭಾರತ ವಿರುದ್ಧ 2022ರ ಟಿ–20 ವಿಶ್ವಕಪ್‌ನಲ್ಲಿ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಆ ವಿಶ್ವಕಪ್‌ನಲ್ಲಿ ಅವರು ಆಡಿಲೇಡ್‌ನಲ್ಲಿ 47 ಎಸೆತಗಳಲ್ಲಿ ಅಜೇಯ 86 ರನ್ ಹೊಡೆದಿದ್ದರು. ಜೋಸ್ ಬಟ್ಲರ್‌ 80 ರನ್ ಹೊಡೆದಿದ್ದು, ಇಂಗ್ಲೆಂಡ್‌ 10 ವಿಕೆಟ್‌ಗಳಿಂದ ಆ ಪಂದ್ಯ ಜಯಿಸಿತ್ತು.

ಮೂರೂ ಮಾದರಿಗಳಲ್ಲಿ ಒಟ್ಟು 156 ಪಂದ್ಯಗಳನ್ನು ಆಡಿರುವ ಹೇಲ್ಸ್‌ 70 ಏಕದಿನ ಪಂದ್ಯಗಳಿಂದ ಸುಮಾರು 38ರ ಸರಾಸರಿಯಲ್ಲಿ 2,419 ರನ್‌ ಗಳಿಸಿದ್ದರೆ. 75 ಟಿ–20 ಪಂದ್ಯಗಳನ್ನು ಆಡಿದ್ದು 2,074 ರನ್ ಕಲೆಹಾಕಿದ್ದಾರೆ.

ಆದರೆ ಕ್ರೀಡಾಂಗಣದ ಹೊರಗೆ ವಿವಾದಗಳಲ್ಲೂ ಅವರು ಸಿಲುಕಿದ್ದಾರೆ. ಬ್ರಿಸ್ಟಲ್‌ನ ನೈಟ್‌ಕ್ಲಬ್‌ ಹೊರಗೆ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಅವರಿಗೆ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಮಾದಕ ವಸ್ತು ಸೇವನೆಗಾಗಿ ಮತ್ತೆ ನಿಷೇಧ ಶಿಕ್ಷೆಗೆ ಒಳಗಾದರು. ಹೀಗಾಗಿ ಅವರು 2019ರ ಏಕದಿನ ವಿಶ್ವಕಪ್‌ ತಂಡದಲ್ಲಿ ಆಡುವ ಅವಕಾಶ ಕೈತಪ್ಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT