ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಪಂದ್ಯ: ಇಂಗ್ಲೆಂಡ್‌ ವಿರುದ್ಧ ಶಕೀಬ್ ಮಿಂಚು, ಬಾಂಗ್ಲಾಗೆ ಜಯ

Last Updated 7 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಚಿತ್ತಗಾಂಗ್‌, ಬಾಂಗ್ಲಾದೇಶ: ಆಲ್‌ರೌಂಡ್ ಆಟವಾಡಿದ ಶಕೀಬ್ ಅಲ್ ಹಸನ್‌ (75 ರನ್‌, 35ಕ್ಕೆ 4) ಅವರು ಬಾಂಗ್ಲಾದೇಶ ತಂಡಕ್ಕೆ ಗೆಲುವು ತಂದುಕೊಟ್ಟರು.

ಸೋಮವಾರ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾ 50 ರನ್‌ಗಳಿಂದ ಗೆದ್ದಿತು. ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿರುವ ಪ್ರವಾಸಿ ಇಂಗ್ಲೆಂಡ್‌ ಸರಣಿಯನ್ನು 2–1ರಿಂದ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ, 48.5 ಓವರ್‌ಗಳಲ್ಲಿ 246 ರನ್ ಗಳಿಸಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ 43.1 ಓವರ್‌ಗಳಲ್ಲಿ 196 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡಿತು. ತಂಡದ ಪರ ಜೇಮ್ಸ್ ವಿನ್ಸ್ (38) ಗರಿಷ್ಠ ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 48.5 ಓವರ್‌ಗಳಲ್ಲಿ 246 (ನಜ್ಮುಲ್ ಹೊಸೇನ್‌ 53, ಮುಶ್ಫೀಕುರ್ ರಹೀಂ 70, ಶಕೀಬ್ ಅಲ್ ಹಸನ್‌ 75; ಸ್ಯಾಮ್ ಕರನ್‌ 51ಕ್ಕೆ 2, ಜೋಫ್ರಾ ಆರ್ಚರ್ 35ಕ್ಕೆ 3, ಆದಿಲ್ ರಶೀದ್‌ 21ಕ್ಕೆ 2). ಇಂಗ್ಲೆಂಡ್‌: 43.1 ಓವರ್‌ಗಳಲ್ಲಿ 196 (ಫಿಲ್ ಸಾಲ್ಟ್‌ 35, ಜೇಮ್ಸ್ ವಿನ್ಸ್ 38, ಕ್ರಿಸ್ ವೋಕ್ಸ್ 34; ತೈಜುಲ್ ಇಸ್ಲಾಂ 52ಕ್ಕೆ 2, ಇಬಾದತ್ ಹೊಸೇನ್‌ 38ಕ್ಕೆ 2, ಶಕೀಬ್ ಅಲ್ ಹಸನ್‌ 35ಕ್ಕೆ 4). ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 50 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT