ಶುಕ್ರವಾರ, ಮಾರ್ಚ್ 24, 2023
22 °C

ಕ್ರಿಕೆಟ್‌: ಶ್ರೀಲಂಕಾ ಆಟಗಾರರ ಕೋವಿಡ್‌ ವರದಿ ‘ನೆಗೆಟಿವ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ : ಭಾರತ ತಂಡದ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಸಜ್ಜಾಗುತ್ತಿರುವ ಶ್ರೀಲಂಕಾ ತಂಡದ ಕುಶಾಲ್ ಪೆರೇರ, ದುಷ್ಮಂತ್ ಚಮೀರಾ ಸೇರಿದಂತೆ ಎಲ್ಲ ಆಟಗಾರರು ಕೋವಿಡ್‌ ಪರೀಕ್ಷೆ ಪೂರ್ಣಗೊಳಿಸಿದ್ದು, ವರದಿ ‘ನೆಗೆಟಿವ್’ ಬಂದಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಈ ಪರೀಕ್ಷೆಗಳನ್ನು ನಡೆಸಿತ್ತು.

ಇಂಗ್ಲೆಂಡ್‌ ಪ್ರವಾಸದಿಂದ ಹಿಂದಿರುಗಿದ ಬಳಿಕ ಈ ಆಟಗಾರರು ಒಂದು ವಾರ ಕ್ವಾರಂಟೈನ್‌ನಲ್ಲಿದ್ದರು. ಸೋಮವಾರ ತಂಡದ ಬಯೋಬಬಲ್ ಪ್ರವೇಶಿಸುವ ನಿರೀಕ್ಷೆಯಿದೆ.

ಬ್ಯಾಟಿಂಗ್ ಕೋಚ್‌ ಗ್ರ್ಯಾಂಟ್‌ ಫ್ಲವರ್ ಹಾಗೂ ಡೇಟಾ ಅನಾಲಿಸ್ಟ್ ಜಿ.ಟಿ.ನಿರೋಶನ್‌ ಹಾಗೂ ಪ್ರತ್ಯೇಕ ಬಯೋಬಬಲ್‌ನಲ್ಲಿರುವ ಇನ್ನೊಬ್ಬ ಆಟಗಾರನಿಗೆ ಕೋವಿಡ್‌ ಖಚಿತಪಟ್ಟ ಬಳಿಕ ಜುಲೈ 13ರಂದು ಪ್ರಾರಂಭವಾಗಬೇಕಿದ್ದ ಭಾರತ ತಂಡದ ಎದುರಿನ ಸರಣಿಯನ್ನು 18ಕ್ಕೆ ಆರಂಭಿಸಲು ನಿರ್ಧರಿಸಲಾಗಿತ್ತು.

ಸದ್ಯ ಸಿಂಹಳೀಯ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ (ಎಸ್‌ಎಸ್‌ಸಿ) ಭಾರತದ ಆಟಗಾರರು ತರಬೇತಿ ಪಡೆಯುತ್ತಿರುವುದರಿಂದ ಶ್ರೀಲಂಕಾ ತಂಡವು ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಲಿದೆ ಎಂದು ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು