ಲಂಡನ್: ಭಾರತ– ಇಂಗ್ಲೆಂಡ್ ನಡುವಣ ಮುಂಬರುವ ಕ್ರಿಕೆಟ್ ಟೆಸ್ಟ್ ಸರಣಿಗೆ ಆ್ಯಂಡರ್ಸನ್– ತೆಂಡೂಲ್ಕರ್ ಟ್ರೋಫಿ ನಾಮಕರಣ ಮಾಡುವ ಕಾರ್ಯಕ್ರಮವು, ಅಹಮದಾಬಾದಿನ ವಿಮಾನ ದುರಂತದ ಕಾರಣ ಮುಂದಕ್ಕೆ ಹೋಗಿದೆ.

ಭಾರತ ತಂಡದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಗೌರವಾರ್ಥ ಈ ಟ್ರೋಫಿಗೆ ಪಟೌಡಿ ಟ್ರೋಫಿ ಎಂದು ಈ ಹಿಂದೆ ಕರೆಯಲಾಗುತಿತ್ತು. ಆದರೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಟ್ರೋಫಿಗೆ ಆ್ಯಂಡರ್ಸನ್– ತೆಂಡೂಲ್ಕರ್ ಟ್ರೋಫಿ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಿದೆ.

ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಜೂನ್ 20ರಂದು ಲೀಡ್ಸ್ನಲ್ಲಿ ನಡೆಯಲಿದೆ.

‘ಎಟಿಟಿ ಟ್ರೋಫಿ ಎಂದು ನಾಮಕರಣ ಕಾರ್ಯಕ್ರಮ ಜೂನ್ 14ರಂದು ನಡೆಯಬೇಕಾಗಿತ್ತು. ಆದರೆ ಅಹಮದಾಬಾದಿನಲ್ಲಿ ವಿಮಾನ ದುರಂತದ ಕಾರಣ ವಿಳಂಬವಾಗಿದೆ. ಈ ತೀರ್ಮಾನ ರದ್ದಾಗಿಲ್ಲ. ಆದರೆ ಸರಣಿಗೆ ಒಂದೆರಡು ದಿನ ಮೊದಲು ಈ ಕಾರ್ಯಕ್ರಮ ನಡೆಯಬಹುದೆಂಬ ವಿಶ್ವಾಸ ಇದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.

ಲಂಡನ್ಗೆ ತೆರಳಬೇಕಾದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕ್ಷಣಾರ್ಧದಲ್ಲಿ ಪತನಗೊಂಡು 275 ಮಂದಿ ಮೃತಪಟ್ಟಿದ್ದರು. ಪ್ರಯಾಣಿಕರಲ್ಲಿ 50ಕ್ಕೂ ಹೆಚ್ಚು ಮಂದಿ ಬ್ರಿಟನ್ನ ನಾಗರಿಕರು ಇದ್ದರು.

ಈ ಮಧ್ಯೆ, ಸರಣಿಗೆ ಪಟೌಡಿ ಟ್ರೋಫಿ ಹೆಸರನ್ನು ಉಳಿಸಿಕೊಳ್ಳುವಂತೆ ಬಿಸಿಸಿಐಯಿಂದ ಇಸಿಬಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಭಾರತದ ಕ್ರಿಕೆಟ್ಗೆ ಪಟೌಡಿ ಕೊಡುಗೆ ಗಮನದಲ್ಲಿಟ್ಟುಕೊಂಡು ಈ ಸರಣಿಗೆ ಅವರದೇ ಹೆಸರನ್ನು ಮುಂದುವರಿಸಲು ತೆಂಡೂಲ್ಕರ್ ಮತ್ತು ಐಸಿಸಿ ಚೇರ್ಮನ್ ಜಯ್ ಶಾ ಅವರು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.