ಸೂರತ್:ಗುಜರಾತ್ ವಿರುದ್ಧ ಶನಿವಾರ ನಡೆದ ‘ವಿನೂ ಮಂಕಡ್ ಟ್ರೋಫಿ’ಯ ಏಕದಿನ ಪಂದ್ಯದಲ್ಲಿ ಮುಂಬೈ ತಂಡದ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಐದು ವಿಕೆಟ್ ಪಡೆದು ಮಿಂಚಿದ್ದಾರೆ.

ಗುಜರಾತ್ ವಿರುದ್ಧ ಟಾಸ್ ಗೆದ್ದಮುಂಬೈ, ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.

ಅರ್ಜುನ್ ದಾಳಿಗೆ ತತ್ತರಿಸಿದ ಗುಜರಾತ್ 49.2 ಓವರ್ಗಳಲ್ಲಿ 142 ರನ್ ಗಳಿಸಿ ಆಲೌಟ್ ಆಗಿತ್ತು. ವರ್ಧ್ಮಾನ್ ದತ್ತೇಶ್ ಷಾ(0), ಪ್ರಿಯಾಶ್(1), ಎಲ್.ಎಲ್.ಕೋಚೆರ್(8), ಜಯಮೀತ್ ಪಟೇಲ್(26), ಧ್ರವಂಗ್ ಪಟೇಲ್ (6) ಅವರನ್ನು ಅರ್ಜುನ್ ಔಟ್ ಮಾಡಿದ್ದರು.

143 ರನ್ಗುರಿಯನ್ನು ಬೆನ್ನತ್ತಿದ ಮುಂಬೈ 38 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ಗುಜರಾತ್ ವಿರುದ್ಧ ಮುಂಬೈ 9 ವಿಕೆಟ್ಗಳ ಜಯ ಸಾಧಿಸಿತು.

ಅಕ್ಟೋಬರ್ 5ರಿಂದ ಆರಂಭವಾಗಿರುವ ಟೂರ್ನಿ ನವೆಂಬರ್ 4ರವರೆಗೆ ನಡೆಯಲಿದೆ. ಮಂಗಳವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಮುಂಬೈ–ಬಂಗಾಳ ತಂಡಗಳು ಮುಖಾಮುಖಿಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.