ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್ : ಜೋ ಡೆನ್ಲಿ, ಬೆನ್‌ ಸ್ಟೋಕ್ಸ್‌ ಆಕರ್ಷಕ ಬ್ಯಾಟಿಂಗ್

Last Updated 15 ಸೆಪ್ಟೆಂಬರ್ 2019, 2:59 IST
ಅಕ್ಷರ ಗಾತ್ರ

ಲಂಡನ್: ಆರು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡ ಜೋ ಡೆನ್ಲಿ ಮತ್ತು ಆಕರ್ಷಕ ಅರ್ಧಶತಕ ಬಾರಿಸಿದ ಬೆನ್ ಸ್ಟೋಕ್ಸ್‌ ಅವರ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ತಂಡವು ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ದೊಡ್ಡ ಮೊತ್ತದ ಗುರಿ ನೀಡುವತ್ತ ದಾಪುಗಾಲಿಟ್ಟಿದೆ.

ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯರು 69 ರನ್‌ಗಳ ಮುನ್ನಡೆ ಸಾಧಿಸಿದ್ದರು. ಎರಡನೇ ಇನಿಂಗ್ಸ್‌ ಆಡುತ್ತಿರುವ ಇಂಗ್ಲೆಂಡ್ ಮೂರನೇ ದಿನವಾದ ಶನಿವಾರ 72 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 249 ರನ್‌ ಗಳಿಸಿತು. ಇದರೊಂದಿಗೆ 318 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ.

ಆರಂಭಿಕ ಜೋಡಿ ರೋರಿ (20 ರನ್) ಮತ್ತು ಜೋ ಡೆನ್ಲಿ (94; 206, 14ಬೌಂಡರಿ, 1ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 54 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯನ್, ರೋರಿ ವಿಕೆಟ್ ಗಳಿಸಿ ಈ ಜೊತೆಯಾಟವನ್ನು ಮುರಿದರು. ಕ್ರೀಸ್‌ಗೆ ಬಂದ ನಾಯಕ ರೂಟ್ (21 ರನ್) ಆಟಕ್ಕೆ ಕುದುರಿಕೊಳ್ಳುವ ಮುನ್ನವೇ ನೇಥನ್ ತಮ್ಮ ಕೈಚಳಕ ಮೆರೆದು ಅವರನ್ನು ಔಟ್ ಮಾಡಿದರು. ಈ ಹಂತದಲ್ಲಿ ಜೊತೆಗೂಡಿದ ಡೆನ್ಲಿ ಮತ್ತು ಸ್ಟೋಕ್ಸ್‌ (67;115ಎಸೆತ, 5ಬೌಂಡರಿ, 2ಸಿಕ್ಸರ್) ಮೂರನೇ ವಿಕೆಟ್ ಜೊತೆಯಾಟದಲ್ಲಿ 117 ರನ್ ಸೇರಿಸಿದರು. ಡೆನ್ಲಿ ಶತಕದ ಅಂಚಿನಲ್ಲಿ ಎಡವಿದರು. ಪೀಟರ್ ಸಿಡ್ಲ್‌ ಎಸೆತವನ್ನು ಸಿಕ್ಸರ್‌ಗೆ ಎತ್ತುವ ಭರದಲ್ಲಿ ಸ್ಟೀವ್‌ ಸ್ಮಿತ್‌ಗೆ ಕ್ಯಾಚಿತ್ತರು. ಸ್ವಲ್ಪ ಹೊತ್ತಿನ ನಂತರ ಲಯನ್‌, ಸ್ಟೋಕ್ಸ್‌ ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 294, ಆಸ್ಟ್ರೇಲಿಯಾ 225, ಎರಡನೇ ಇನಿಂಗ್ಸ್‌; ಇಂಗ್ಲೆಂಡ್: 72 ಓವರ್‌ಗಳಲ್ಲಿ 4ಕ್ಕೆ249 (ರೋರಿ ಬರ್ನ್ಸ್‌ 20, ಜೋ ಡೆನ್ಲಿ 94, ಜೋ ರೂಟ್ 21, ಬೆನ್ ಸ್ಟೋಕ್ಸ್‌ 67, ಜಾನಿ ಬೆಸ್ಟೊ 14, ಜೋಸ್ ಬಟ್ಲರ್ 15, ನೇಥನ್ ಲಯನ್ 56ಕ್ಕೆ3, ಪೀಟರ್ ಸಿಡ್ಕ್ 51ಕ್ಕೆ1) ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT