ಶನಿವಾರ, ಡಿಸೆಂಬರ್ 7, 2019
21 °C

ಆ್ಯಷಸ್‌ ಟೆಸ್ಟ್ :ಇಂಗ್ಲೆಂಡ್‌ಗೆ 135 ರನ್ ಗೆಲುವು, ಸರಣಿ ಸಮಬಲ

Published:
Updated:

ಲಂಡನ್: ಆ್ಯಷಸ್ ಟೆಸ್ಟ್ ಸರಣಿಯ  ಕೊನೆಯ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವು ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು 135 ರನ್‌ಗಳಿಂದ  ಪರಾಭವಗೊಳಿಸಿ ಸರಣಿ ಡ್ರಾ ಮಾಡಿಕೊಂಡಿದೆ.

ಇದನ್ನೂ ಓದಿ: ಆ್ಯಷಸ್‌: ಸೋಲಿನಿಂದ ಪಾರಾಗಲು ವೇಡ್ ಹೋರಾಟ

ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ  5ನೇ ಟೆಸ್ಟ್  ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ವಿಜಯ ತನ್ನದಾಗಿಸಿಕೊಂಡಿದೆ.

ನಾಲ್ಕನೇ ದಿನವಾದ ಭಾನುವಾರ 399 ರನ್‌ಗಳ ಗುರಿ ಬೆನ್ನು ಹತ್ತಿ ಬ್ಯಾಟಿಂಗ್‌ಗಿಳಿದ  ಆಸ್ಟ್ರೇಲಿಯಾ ತಂಡ  77 ಓವರ್‌ನಲ್ಲಿ ಎಲ್ಲ ವಿಕೆಟ್  ಕಳೆದುಕೊಂಡು  263 ರನ್ ಗಳಿಸಿತ್ತು. 

ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಶತಕ ದಾಖಲಿಸಿ  ಮ್ಯಾಥ್ಯೂ ವೇಡ್ (117) ಎರಡನೇ ಇನ್ನಿಂಗ್ಸ್‌ನಲ್ಲಿಯೂ  ಆಸ್ಟ್ರೇಲಿಯಾದ ಟಾಪ್ ಸ್ಕೋರರ್ ಆಗಿದ್ದಾರೆ.

ಇಂಗ್ಲೆಂಡ್ ಪರವಾಗಿ  ಸ್ಟುವರ್ಟ್‌ ಬ್ರಾಡ್, ಜ್ಯಾಕ್ ಲೀಚ್ ತಲಾ ನಾಲ್ಕು ವಿಕೆಟ್ ಗಳಿಸಿದ್ದು,  ಜೋ ರೂಟ್  2 ವಿಕೆಟ್ ಗಳಿಸಿದ್ದಾರೆ. ಟೆಸ್ಟ್ ಸರಣಿ  2-2  ಸಮಬಲದೊಂದಿಗಗೆ ಕೊನೆಗೊಂಡಿದ್ದು ಆ್ಯಷಸ್ ಟ್ರೋಫಿ ಆಸ್ಟ್ರೇಲಿಯಾ ತಂಡದ ಬಳಿಯೇ ಉಳಿಯಲಿದೆ.

ಸ್ಕೋರ್
 ಇಂಗ್ಲೆಂಡ್ -  294 & 329 
ಆಸ್ಟ್ರೇಲಿಯಾ -   225& 263 (77.0  ಓವರ್)
ಮ್ಯಾನ್ ಆಫ್ ದಿ ಮ್ಯಾಚ್   - ಜೋಫ್ರಾ ಆರ್ಚರ್
ಮ್ಯಾನ್ ಆಫ್ ದಿ ಸಿರೀಸ್ -  ಬೆನ್  ಸ್ಟೋಕ್ಸ್ ಮತ್ತು ಸ್ಟೀವನ್ ಸ್ಮಿತ್

ಇದನ್ನೂ ಓದಿ: ಆ್ಯಷಸ್ : ಜೋ ಡೆನ್ಲಿ, ಬೆನ್‌ ಸ್ಟೋಕ್ಸ್‌ ಆಕರ್ಷಕ ಬ್ಯಾಟಿಂಗ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು