ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup Final: ಅಕ್ಷರ್ ಬದಲು ವಾಷಿಂಗ್ಟನ್; ಲಂಕಾ ಬ್ಯಾಟಿಂಗ್ ಆಯ್ಕೆ

Published 17 ಸೆಪ್ಟೆಂಬರ್ 2023, 9:22 IST
Last Updated 17 ಸೆಪ್ಟೆಂಬರ್ 2023, 9:22 IST
ಅಕ್ಷರ ಗಾತ್ರ

ಕೊಲಂಬೊ: ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಟಾಸ್ ಗೆದ್ದ ಶ್ರೀಲಂಕಾದ ನಾಯಕ ದಸುನ್ ಶನಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಸುಂದರ್‌ಗೆ ಅವಕಾಶ...

ಭಾರತ ತಂಡದಲ್ಲಿ ಗಾಯಾಳು ಅಕ್ಷರ್ ಪಟೇಲ್ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆಯಾಗಿದ್ದಾರೆ. ಕೊನೆಯ ಹಂತದಲ್ಲಿ ಸುಂದರ್ ತಂಡವನ್ನು ಸೇರಿದ್ದರು.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ಮೊಹಮ್ಮದ್ ಸಿರಾಜ್ ತಂಡವನ್ನು ಸೇರಿದ್ದಾರೆ.

ಭಾರತ ಪ್ಲೇಯಿಂಗ್ ಇಲೆವೆನ್ ಇಂತಿದೆ:

ರೋಹಿತ್ ಶರ್ಮಾ, (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್.

ಲಂಕಾ ತಂಡದಲ್ಲಿ ಗಾಯಾಳು ತೀಕ್ಷ್ಮಣ ಬದಲು ದುಶಾನ್ ಹೇಮಂತ ಆಯ್ಕೆಯಾಗಿದ್ದಾರೆ.

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್:

ಪಥುಮ್ ನಿಸಾಂಕ, ಕುಶಾಲ ಪೆರೆರಾ, ಕುಶಾಲ ಮೆಂಡಿಸ್ (ಉಪನಾಯಕ), ಸದೀರ ಸಮರವಿಕ್ರಮ, ಚರಿತ ಅಸಲಂಕಾ, ಧನಂಜಯ್ ಡಿಸಿಲ್ವಾ, ದಸುನ್ ಶನಕಾ (ನಾಯಕ), ದುನಿತ್ ವೆಲ್ಲಾಳಗೆ, ದುಶಾನ್ ಹೇಮಂತ, ಪ್ರಮೋದ ಮಧುಶಾನ್ ಮತ್ತು ಮತೀಷ ಪಥಿರಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT