ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS Vs NZ 3rd T20I | ಕ್ಲೀನ್‌ಸ್ವೀಪ್ ಮಾಡಿದ ಆಸ್ಟ್ರೇಲಿಯಾ

Published 25 ಫೆಬ್ರುವರಿ 2024, 13:49 IST
Last Updated 25 ಫೆಬ್ರುವರಿ 2024, 13:49 IST
ಅಕ್ಷರ ಗಾತ್ರ

ಆಕ್ಲಂಡ್‌: ಆಸ್ಟ್ರೇಲಿಯಾ ತಂಡ ಮಳೆಯ ಆಟವನ್ನು ಕಂಡ ಮೂರನೇ ಹಾಗೂ ಅಂತಿಮ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಭಾನುವಾರ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಡಕ್ವರ್ಥ್‌ ಮತ್ತು ಲೂಯಿಸ್‌ ನಿಯಮದಡಿ 27 ರನ್‌ಗಳಿಂದ ಸೋಲಿಸಿತು. ಆ ಮೂಲಕ ಸರಣಿಯನ್ನು 3–0 ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ಟಿ20 ವಿಶ್ವಕಪ್ ಹತ್ತಿರ ಬರುತ್ತಿರುವ ಈ ಗೆಲುವು ಆ ತಂಡದ ವಿಶ್ವಾಸವನ್ನು ವೃದ್ಧಿಸಲು ನೆರವಾಗಲಿದೆ. 100ನೇ ಪಂದ್ಯ ಆಡಿದ ನಾಯಕ ಮಿಚೆಲ್‌ ಸ್ಯಾಂಟನರ್ ಟಾಸ್‌ ಗೆದ್ದು, ಮಳೆಯ ನಿರೀಕ್ಷೆಯಿಂದ ಬ್ಯಾಟ್‌ ಮಾಡಲು ನಿರ್ಧರಿಸಿದರು. ಪ್ರವಾಸಿಗರ ಇನಿಂಗ್ಸ್‌ ವೇಳೆ ಮೂರು ಬಾರಿ ಮಳೆಯಿಂದ ಅಡಚಣೆಯಾಯಿತು. ಅಂತಿಮವಾಗಿ 10.4 ಓವರುಗಳಲ್ಲಿ 4 ವಿಕೆಟ್‌ಗೆ 118 ರನ್ ಗಳಿಸಿತು.  ಡಕ್‌ವರ್ತ್ ಲೂಯಿಸ್ ನಿಯಮದಡಿ ನ್ಯೂಜಿಲೆಂಡ್‌ 10 ಓವರುಗಳಲ್ಲಿ126 ರನ್ ಗಳಿಸಬೇಕಾಗಿತ್ತು. ಅದು 3 ವಿಕೆಟ್‌ಗೆ 98 ರನ್ ಗಳಿಸುವಷ್ಟರಲ್ಲಿ ಓವರುಗಳು ಮುಗಿದವು.

27 ರನ್ ಮತ್ತು ಒಂದು ವಿಕೆಟ್‌ ಪಡೆದ ಮ್ಯಾಥ್ಯೂ ಶಾರ್ಟ್‌ ಪಂದ್ಯದ ಆಟಗಾರನಾದರೆ, ಮಿಚೆಲ್ ಮಾರ್ಷ್ ಸರಣಿಯ ಆಟಗಾರನಾದರು.

ಸ್ಕೋರುಗಳು: 10.4 ಓವರುಗಳಲ್ಲಿ 4 ವಿಕೆಟ್‌ಗೆ 118 (ಟ್ರಾವಿಸ್‌ ಹೆಡ್‌ 33, ಮ್ಯಾಥ್ಯೂ ಶಾರ್ಟ್‌ 27); ನ್ಯೂಜಿಲೆಂಡ್‌: 10 ಓವರುಗಳಲ್ಲಿ 3 ವಿಕೆಟ್‌ಗೆ 98 (ಗ್ಲೆನ್‌ ಫಿಲಿಪ್ಸ್‌ ಔಟಾಗದೇ 40, ಚಾಪ್ಮನ್ ಔಟಾಗದೇ 17)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT