ಮೆಲ್ಬರ್ನ್: ಗಾಯದಿಂದಾಗಿ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಅನುಭವಿ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, ಬೌಲರ್ ಸೀನ್ ಅಬಾಟ್ ಮತ್ತು ಯುವ ಆಟಗಾರ ವಿಲ್ ಪುಕೊವಸ್ಕಿ ಆಸ್ಟ್ರೇಲಿಯಾ ತಂಡಕ್ಕೆ ಮರಳಿದ್ದಾರೆ.

ಜನವರಿ 7ರಿಂದ ಸಿಡ್ನಿಯಲ್ಲಿ ನಡೆಯಲಿರುವ ಭಾರತ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಪ್ರಕಟಿಸಿದೆ.

ಅಡಿಲೇಡ್ನಲ್ಲಿ ಭರ್ಜರಿ ಜಯಗಳಿಸಿ, ಮೆಲ್ಬರ್ನ್ನಲ್ಲಿ ಸೋತಿದ್ದ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಸತತ ವೈಫಲ್ಯ ಅನುಭವಿಸಿದ ಬ್ಯಾಟ್ಸ್ಮನ್ ಜೋ ಬರ್ನ್ಸ್ ಅವರನ್ನು ಕೈಬಿಡಲಾಗಿದೆ.

’ಗಾಯದಿಂದ ಚೇತರಿಸಿಕೊಂಡು ಸಂಪೂರ್ಣ ಫಿಟ್ ಆಗಿರುವ ವಾರ್ನರ್ ಗುರುವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರೊಂದಿಗೆ ವಿಲ್ ಪುಕೊವಸ್ಕಿ ಮತ್ತುಸೀನ್ ಅಬಾಟ್ ಕೂಡ ಮರಳುತ್ತಾರೆ‘ ಎಂದು ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವರ್ ಹಾನ್ಸ್ ಹೇಳಿದ್ದಾರೆ.

ಭಾರತದ ಎದುರಿನ ಅಭ್ಯಾಸ ಪಂದ್ಯದಲ್ಲಿ ಪುಕೊವಸ್ಕಿ ಕನಕಷನ್ಗೆ ಒಳಗಾಗಿದ್ದರು. ಆದ್ದರಿಂದ ಆವರಿಗೆ ಮೊದಲ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲು ಅವಕಾಶ ನೀಡಿರಲಿಲ್ಲ. ಸೀನ್ ಅಬಾಟ್ ಕುತ್ತಿಗೆ ನೋವಿನ ಕಾರಣ ವಿಶ್ತಾಂತಿ ಪಡೆದಿದ್ದರು.

ತಂಡ: ಟಿಮ್ ಪೇನ್ (ನಾಯಕ), ಸೀನ್ ಅಬಾಟ್, ಪ್ಯಾಟ್ ಕಮಿನ್ಸ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಮೊಯಿಸೆಸ್ ಹೆನ್ರಿಕ್ಸ್, ಮಾರ್ನಸ್ ಲಾಬುಷೇನ್, ನೇಥನ್ ಲಯನ್, ಮಿಚೆಲ್ ನೆಸೆರ್, ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೊವಸ್ಕಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವಿಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.