ಸೋಮವಾರ, ಜುಲೈ 26, 2021
23 °C

ಬಾಂಗ್ಲಾ ಎದುರು ಟಿ–20 ಸರಣಿ ಆಡಲಿರುವ ಆಸ್ಟ್ರೇಲಿಯಾ

ಎಪಿ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶದ ಎದುರು ಮುಂದಿನ ತಿಂಗಳು ಐದು ಟ್ವೆಂಟಿ–20 ಪಂದ್ಯಗಳಲ್ಲಿ ಆಡಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಗುರುವಾರ ತಿಳಿಸಿದೆ.

ಢಾಕಾದ ಮೀರ್‌ಪುರದ ಶೇರ್–ಎ–ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಗಸ್ಟ್ 3–9ರವರೆಗ ಈ ಪಂದ್ಯಗಳು ನಿಗದಿಯಾಗಿವೆ.

2017ರ ಬಳಿಕ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುತ್ತಿದೆ. ಜುಲೈ 29ಕ್ಕೆ ಪ್ರವಾಸಿ ತಂಡವು ಢಾಕಾಗೆ ಬಂದಿಳಿಯಲಿದೆ.

‘ಕೋವಿಡ್ -19 ಪಿಡುಗಿನ ಬಿಕ್ಕಟ್ಟಿನಿಂದಾಗಿ ಸರಣಿ ನಡೆಸುವುದು ಸಹಜವಾಗಿಯೇ ಒಂದು ಸವಾಲು. ಏಕೆಂದರೆ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು ಈ ಸಮಯದಲ್ಲಿ ಅಗತ್ಯವಾಗಿದೆ. ಸರಣಿಯ ಮಾರ್ಗಸೂಚಿಗಳನ್ನು ಖಚಿತಪಡಿಸಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್‌ ಆಸ್ಟ್ರೇಲಿಯಾ ಮಾತುಕತೆ ನಡೆಸುತ್ತಿವೆ‘ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಜಾಮುದ್ದೀನ್‌ ಚೌಧರಿ ಹೇಳಿದ್ದಾರೆ.

‘ತಂಡಗಳಿಗೆ ಬಯೋಸೆಕ್ಯೂರ್ ವಾತಾವರಣವನ್ನು ಕಲ್ಪಿಸುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ‘ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು