ಅಡಿಲೇಡ್: ಆಸ್ಟ್ರೇಲಿಯಾ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದ ಟೆಸ್ಟ್ ಪರಿಣತ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ, ಬಾರ್ಡರ್–ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆಯ ಬ್ಯಾಟಿಂಗ್ ವಿಭಾಗಕ್ಕೆ ಆಧಾರವಾದರು.

ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ಆರಂಭಿಕ ಕೆ.ಎಲ್. ರಾಹುಲ್(02) ಹಾಗೂಮುರುಳಿ ವಿಜಯ್(11) ನಿರಾಸೆ ಮೂಡಿಸಿದರು. ಬಳಿಕ ಬಂದ ಕೊಹ್ಲಿಯೂ(03) ಹೆಚ್ಚು ಹೊತ್ತು ನಿಲ್ಲಲಿಲ್ಲ.

ವೇಗಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಕೊಹ್ಲಿ ಬಾರಿಸಿದ ಚೆಂಡನ್ನು ಸೊಗಸಾಗಿ ಹಿಡಿತಕ್ಕೆ ಪಡೆದ ಉಸ್ಮಾನ್ ಖವಾಜ ಆಸಿಸ್ ಪಾಳಯದಲ್ಲಿ ಸಂಭ್ರಮ ಅಲೆ ಮೂಡಿಸಿದರು. ಅನುಭವಿ ಅಜಿಂಕ್ಯಾ ರಹಾನೆಯೂ (13) ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ತಂಡದ ಮೊತ್ತ 41 ಕ್ಕೆ 4.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್ಗೆ ಅಂಟಿಕೊಂಡಂತೆ ಆಡಿದ ಪೂಜಾರ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು.ಟೆಸ್ಟ್ ಬದುಕಿನ 16ನೇ ಶತಕ ಪೂರೈಸಿದ ಅವರು, ಬರೋಬ್ಬರಿ 246 ಎಸೆತಗಳನ್ನು ಎದುರಿಸಿ 7 ಬೌಂಡರಿ, ಎರಡು ಸಿಕ್ಸರ್ ಸಹಿತ 123 ರನ್ ಗಳಿಸಿದರು.

ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಬಂದು 37 ರನ್ ಗಳಿಸಿದ ರೋಹಿತ್ ಶರ್ಮಾ ಕೆಲ ಹೊತ್ತು ಪೂಜಾರಗೆ ಉತ್ತಮ ಬೆಂಬಲ ನೀಡಿದರು. ರಿಷಭ್ ಪಂತ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 25ರನ್ಗಳ ಕಾಣಿಕೆ ನೀಡಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.

ದಿನದಾಟ ಮುಗಿಯಲು ಕೆಲ ನಿಮಿಷಗಳಿದ್ದಾಗ ಪೂಜಾರ ರನ್ ಔಟ್ ಆಗುವುದರೊಂದಿಗೆ ಮೊದಲ ದಿನದಾಟ ಮುಕ್ತಾಯವಾಗಿದ್ದು, ಸದ್ಯಭಾರತ ತಂಡ9 ವಿಕೆಟ್ ಕಳೆದುಕೊಂಡು 250ರನ್ ಗಳಿಸಿದೆ. ಮೊಹಮ್ಮದ್ ಶಮಿ ಕ್ರೀಸ್ನಲ್ಲಿದ್ದು, ಜಸ್ಪ್ರೀತ್ ಬೂಮ್ರಾ ಎರಡನೇ ದಿನ ಬ್ಯಾಟಿಂಗ್ಗೆ ಇಳಿಯಲಿದ್ದಾರೆ.

ಆಸ್ಟ್ರೇಲಿಯಾ ಪರ ವೇಗಿಗಳಾದ ಮಿಚೇಲ್ ಸ್ಟಾರ್ಕ್,ಜೋಶ್ ಹ್ಯಾಜಲ್ವುಡ್, ಪ್ಯಾಟ್ ಕಮಿನ್ಸ್, ಸ್ಪಿನ್ನರ್ನೇಥನ್ ಲಿಯೊನ್ ತಲಾ ಎರಡು ವಿಕೆಟ್ ಪಡೆದು ಕೊಹ್ಲಿ ಪಡೆಯ ಬ್ಯಾಟಿಂಗ್ಗೆ ಅಡ್ಡಿ ಪಡಿಸಿದರು.

ಸ್ಕೋರ್ ವಿವರ

ಮೊದಲ ಇನಿಂಗ್ಸ್: ಭಾರತ(ಮೊದಲ ದಿನದ ಅಂತ್ಯಕ್ಕೆ) 87.5 ಓವರ್ಗಳಲ್ಲಿ 250

ಬ್ಯಾಟಿಂಗ್:ಕೆ.ಎಲ್. ರಾಹುಲ್ 02,ಮುರುಳಿ ವಿಜಯ್ 11,ವಿರಾಟ್ ಕೊಹ್ಲಿ 03,ಚೇತೇಶ್ವರ ಪೂಜಾರ 120,ಅಜಿಂಕ್ಯಾ ರಹಾನೆ 13,ರೋಹಿತ್ ಶರ್ಮಾ37,ರಿಷಭ್ ಪಂತ್ 25,ರವಿಚಂದ್ರನ್ ಅಶ್ವಿನ್ 25,ಇಶಾಂತ್ ಶರ್ಮಾ 04,ಮೊಹಮದ್ ಶಮಿ 06 ಬ್ಯಾಟಿಂಗ್

ಬೌಲಿಂಗ್:ಮಿಚೇಲ್ ಸ್ಟಾರ್ಕ್ 63ಕ್ಕೆ 2, ಜೋಶ್ ಹ್ಯಾಜಲ್ವುಡ್ 52ಕ್ಕೆ 2, ಪ್ಯಾಟ್ ಕಮಿನ್ಸ್ 49ಕ್ಕೆ 2, ನೇಥನ್ ಲಿಯೊನ್ 83ಕ್ಕೆ 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.