ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ -ಆಸ್ಟ್ರೇಲಿಯಾ ಎರಡನೇ ಟಿ–20 ಪಂದ್ಯಕ್ಕೆ ಮಳೆ ಅಡ್ಡಿ

Last Updated 23 ನವೆಂಬರ್ 2018, 9:50 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ ಸಾಧಾರಣ ಮೊತ್ತ ಕಲೆಹಾಕಿದೆ.

ಆಸ್ಟ್ರೇಲಿಯಾ19 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಿದೆ. ಸದ್ಯ ಮಳೆ ಬಂದ ಪರಿಣಾಮ ಪಂದ್ಯ ಸ್ಥಗಿತಗೊಂಡಿದೆ.

ಭಾರತದ ಪರ ಭುವನೇಶ್ವರ್‌ ಕುಮಾರ್‌ 2, ಖಲೀಲ್‌ ಅಹಮ್ಮದ್‌ 2, ಜಸ್‌ಪ್ರೀತ್‌ ಬೂಮ್ರಾ 1, ಕುಲದೀಪ್‌ ಯಾದವ್‌ 1, ಕೃಣಾಲ್‌ ಪಾಂಡ್ಯ 1 ವಿಕೆಟ್‌ ಪಡೆದಿದ್ದಾರೆ.

ಆಸ್ಟ್ರೇಲಿಯಾ ಪರ: ಡಾರ್ಚಿ ಶಾರ್ಟ್ 14, ಆ್ಯರನ್ ಫಿಂಚ್ 00, ಕ್ರಿಸ್‌ ಲಿನ್ 13, ಗ್ಲೆನ್ ಮ್ಯಾಕ್ಸ್‌ವೆಲ್ 19, ಮಾರ್ಕಸ್‌ ಸ್ಟೊಯಿನಿಸ್ 04, ಅಲೆಕ್ಸ್‌ ಕ್ಯಾರಿ 04, ನೇಥನ್ ಕೌಲ್ಟರ್‌ ನೈಲ್ 18, ಬೆನ್‌ ಮೆಕ್‌ಡರ್ಮಾಟ್ 32*, ಆ್ಯಂಡ್ರ್ಯೂ ಟೈ 12* ರನ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT