ಮೆಲ್ಬರ್ನ್: ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಉತ್ತಮ ಪ್ರದರ್ಶನದ ನೆರವಿನಿಂದಭಾರತ ತಂಡಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಇಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೊಹ್ಲಿ ಪಡೆ ಮೊದಲ ದಿನದಾಟದ ಅಂತ್ಯಕ್ಕೆಎರಡು ವಿಕೆಟ್ ಕಳೆದುಕೊಂಡು 215 ರನ್ ಗಳಿಸಿದೆ. ಕಳೆದೆರಡು ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಅನುಭಿಸಿದ್ದ ಆರಂಭಿಕ ಜೋಡಿ ಕೆ.ಎಲ್.ರಾಹುಲ್ ಹಾಗೂ ಮುರುಳಿ ವಿಜಯ್ಗೆ ಈ ಪಂದ್ಯದಲ್ಲಿ ಕೋಕ್ ನೀಡಲಾಗಿತ್ತು. ಅವರ ಬದಲು ತಂಡ ಕೂಡಿಕೊಂಡಿದ್ದ ಹನುಮ ವಿಹಾರಿ, ಮಯಂಕ್ ಅಗರವಾಲ್ಇನಿಂಗ್ಸ್ ಆರಂಭಿಸಿದ್ದರು.

66 ಎಸೆತಗಳನ್ನು ಎದುರಿಸಿದ ವಿಹಾರಿ ಕೇವಲ ಎಂಟು ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಕನ್ನಡಿಗ ಮಯಂಕ್ ಅಗರವಾಲ್ 76 ರನ್ ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಟೆಸ್ಟ್ ಪರಿಣಿತ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಜೊತೆ ಎರಡನೇ ವಿಕೆಟ್ಗೆ 83ರನ್ ಸೇರಿಸಿದರು.

ಆರಂಭಿಕ ಬ್ಯಾಟ್ಸ್ಮನ್ಗಳಿಬ್ಬರ ವಿಕೆಟ್ ವೇಗಿ ಪ್ಯಾಟ್ ಕಮಿನ್ಸ್ಗೆ ಪಾಲಾದವು. ಸದ್ಯ ಪೂಜಾರ ಹಾಗೂನಾಯಕ ವಿರಾಟ್ ಕೊಹ್ಲಿ ಕ್ರೀಸ್ನಲ್ಲಿದ್ದು, ಕ್ರಮವಾಗಿ 68, 47 ರನ್ಗಳಿಸಿ ಆಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.