ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಜಲ್‌ವುಡ್‌ ದಾಳಿಗೆ ಪರದಾಡಿದ ಪಾಕಿಸ್ತಾನ

Published 5 ಜನವರಿ 2024, 21:30 IST
Last Updated 5 ಜನವರಿ 2024, 21:30 IST
ಅಕ್ಷರ ಗಾತ್ರ

ಸಿಡ್ನಿ: ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ ಪಡೆದ ಜೋಶ್‌ ಹ್ಯಾಜಲ್‌ವುಡ್‌ (5–2–9–4), ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಶುಕ್ರವಾರ ಮೂರನೇ ದಿನದಾಟ ಮುಗಿದಾಗ ಆಸ್ಟ್ರೇಲಿಯಾಕ್ಕೆ ಸ್ಪಷ್ಟ ಮೇಲುಗೈ ಪಡೆಯಲು ನೆರವಾದರು.

ಹದಗೆಡುತ್ತಿರುವ ಪಿಚ್‌ನಲ್ಲಿ ನಾಲ್ಕು ವಿಕೆಟ್‌ಗೆ 67 ರನ್ ಗಳಿಸಿದ್ದ ಪ್ರವಾಸಿ ತಂಡ, ಹ್ಯಾಜಲ್‌ವುಡ್‌ ದಾಳಿಗೆ ಸಿಲುಕಿ ದಿನದ ಕೊನೆಗೆ 7 ವಿಕೆಟ್‌ಗೆ 68 ರನ್‌ ಮಾಡಿದ್ದು ಒಟ್ಟಾರೆ 82 ರನ್ ಮುನ್ನಡೆಯಲ್ಲಿದೆ.

ಸ್ಕೋರುಗಳು: 1ನೇ ಇನಿಂಗ್ಸ್‌: ಪಾಕಿಸ್ತಾನ: 313, ಆಸ್ಟ್ರೇಲಿಯಾ: 109.4 ಓವರುಗಳಲ್ಲಿ 299 (ಲಾಬುಷೇನ್ 60, ಸ್ಮಿತ್ 38, ಮಾರ್ಷ್‌ 54, ಅಲೆಕ್ಸ್‌ ಕ್ಯಾರಿ 38; ಅಮೀರ್ ಜಮಾಲ್ 69ಕ್ಕೆ6); ಎರಡನೇ ಇನಿಂಗ್ಸ್‌: ಪಾಕಿಸ್ತಾನ: 26 ಓವರುಗಳಲ್ಲಿ 7 ವಿಕೆಟ್‌ಗೆ 68 (ಸಯೀಮ್ ಅಯೂಬ್ 33, ಬಾಬರ್ ಆಜಂ 23; ಹೇಜಲ್‌ವುಡ್‌ 9ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT