ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Australia Vs West Indies | ಶಾಮರ್ ಬಿರುಗಾಳಿಗೆ ಕುಸಿದ ಆಸ್ಟ್ರೇಲಿಯಾ

Published 28 ಜನವರಿ 2024, 15:27 IST
Last Updated 28 ಜನವರಿ 2024, 15:27 IST
ಅಕ್ಷರ ಗಾತ್ರ

ಬ್ರಿಸ್ಬೇನ್: ವೆಸ್ಟ್ ಇಂಡೀಸ್ ತಂಡದ ಯುವಪ್ರತಿಭೆ ಶಾಮರ್ ಜೋಸೆಫ್ ಅವರ ಸ್ವಿಂಗ್ ದಾಳಿಯ ಮುಂದೆ ಆತಿಥೇಯ ಆಸ್ಟ್ರೇಲಿಯಾ ತಂಡವು ತತ್ತರಿಸಿತು.

ಗಾಬಾ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ನಲ್ಲಿ ಭಾನುವಾರ ಶಾಮರ್ (68ಕ್ಕೆ7) ದಾಳಿಯ ಬಲದಿಂದ ವೆಸ್ಡ್ ಇಂಡೀಸ್ ತಂಡವು 8 ರನ್‌ಗಳ ಜಯ ಸಾಧಿಸಿತು. 1997ರ ನಂತರ ವಿಂಡೀಸ್ ತಂಡವು ಆಸ್ಟ್ರೇಲಿಯಾದಲ್ಲಿ ಗೆದ್ದ ಮೊದಲ ಟೆಸ್ಟ್ ಇದು.

ಗಾಯಗೊಂಡಿದ್ದರೂ ಅಮೋಘ ಬೌಲಿಂಗ್ ಪ್ರದರ್ಶಿಸಿದ 24 ವರ್ಷದ ಜೋಸೆಫ್ ಈ ಪಂದ್ಯದ ಎರಡೂ ಇನಿಂಗ್ಸ್ ಸೇರಿ ಎಂಟು ವಿಕೆಟ್ ಗಳಿಸಿದರು.

216 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆತಿಥೇಯ ತಂಡವು 50.5 ಓವರ್‌ಗಳಲ್ಲಿ 207 ರನ್‌ ಗಳಿಸಲಷ್ಟೇ ಶಕ್ತವಾಯಿತು.  ಮೂರು ಪಂದ್ಯಗಳ ಸರಣಿಯು ಸಮಬಲವಾಯಿತು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್: 311, ಆಸ್ಟ್ರೇಲಿಯಾ: 289. ಎರಡನೇ ಇನಿಂಗ್ಸ್: ವೆಸ್ಟ್ ಇಂಡೀಸ್: 72.3 ಓವರ್‌ಗಳಲ್ಲಿ 193. ಆಸ್ಟ್ರೇಲಿಯಾ: 50.5 ಓವರ್‌ಗಳಲ್ಲಿ 207(ಸ್ಟೀವ್ ಸ್ಮಿತ್ ಔಟಾಗದೆ 91, ಕ್ಯಾಮರಾನ್ ಗ್ರೀನ್ 42, ಮಿಚೆಲ್ ಸ್ಟಾರ್ಕ್ 21, ಅಲ್ಜರಿ ಜೋಸೆಫ್ 62ಕ್ಕೆ2, ಶಾಮರ್ ಜೋಸೆಫ್ 68ಕ್ಕೆ7) ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 8 ರನ್ ಜಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT