ಬ್ರಿಸ್ಬೇನ್: ಆಸ್ಟ್ರೇಲಿಯಾ ಎದುರಿನ 'ಐಸಿಸಿ ಚಾಂಪಿಯನ್ಷಿಪ್' ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲೂ ನೀರಸ ಪ್ರದರ್ಶನ ತೋರಿದ ಭಾರತದ ವನಿತೆಯರು, 122 ರನ್ ಅಂತರದ ಹೀನಾಯ ಸೋಲಿಗೆ ಶರಣಾದರು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2–0 ಅಂತರದಲ್ಲಿ ಕೈಚೆಲ್ಲಿದರು.

ಇಲ್ಲಿನ ಅಲನ್ ಬಾರ್ಡರ್ ಫೀಲ್ಡ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನೀಡಿದ 372 ರನ್ಗಳ ಕಠಿಣ ಗುರಿ ಬೆನ್ನತ್ತಿದ ಭಾರತ, 249 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು.

ಬೃಹತ್ ಗುರಿ ಎದುರು, ಉಪ ನಾಯಕಿ ಸ್ಮೃತಿ ಮಂದಾನ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ರಿಚಾ ಘೋಷ್, ಅರ್ಧಶತಕ (54 ರನ್) ಗಳಿಸಿದರು. ನಾಯಕಿ ಹರ್ಮನ್ಪ್ರೀತ್ ಕೌರ್ (38 ರನ್), ಜೆಮಿಮಾ ರಾಡ್ರಿಗಸ್ (43 ರನ್) ಮತ್ತು ಮಿನ್ನು ಮಣಿ (46 ರನ್) ಪ್ರತಿರೋಧ ತೋರಿದರು. ಆದರೆ, ಪಂದ್ಯ ಗೆಲ್ಲಲು ಅವರ ಆಟ ಸಾಕಾಗಲಿಲ್ಲ.

ಮೊದಲ ಪಂದ್ಯದಲ್ಲಿ 8 ರನ್ ಗಳಿಸಿದ್ದ ಮಂದಾನ ಆಟ, ಈ ಬಾರಿ 9 ರನ್ಗೆ ಕೊನೆಯಾಯಿತು. ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ ಸಹ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಲು ವಿಫಲರಾದರು. ಹೀಗಾಗಿ, ಭಾರತ ತಂಡ ಇನ್ನೂ 5.1 ಓವರ್ ಬಾಕಿ ಇರುವಂತೆಯೇ ಆಲೌಟ್ ಆಯಿತು.

ಅನ್ನಾಬೆಲ್ ಶುಥರ್ಲ್ಯಾಂಡ್ 4 ವಿಕೆಟ್ ಪಡೆದು ಮಿಂಚಿದರು.

ಸರಣಿಯ ಅಂತಿಮ ಪಂದ್ಯವು ಇದೇ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ.

ಪೆರಿ, ಜಾರ್ಜಿಯಾ ಶತಕದಾಟ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾಗೆ ಫೊಯಬೆ ಲಿಚ್ಫೀಲ್ಡ್ ಮತ್ತು ಜಾರ್ಜಿಯಾ ವೊಲ್ ಭದ್ರ ಅಡಿಪಾಯ ಹಾಕಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 19.2 ಓವರ್ಗಳಲ್ಲೇ 130 ರನ್ ಕಲೆಹಾಕಿದರು. ಅರ್ಧಶತಕ ಗಳಿಸಿದ್ದ ಫೊಯಬೆ (60 ರನ್) ವಿಕೆಟ್ ಪತನದ ಬಳಿಕ ಬಂದ ಎಲಿಸ್ ಪೆರಿ, ಭಾರತದ ಬೌಲರ್ಗಳಿಗೆ ನೀರಿಳಿಸಿದರು.

ಕೇವಲ 75 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 105 ರನ್ ಚಚ್ಚಿದರು. ಇನ್ನೊಂದು ತುದಿಯಲ್ಲಿ ನಿಧಾನವಾಗಿ ರನ್ ಗತಿ ಏರಿಸಿಕೊಂಡ ಜಾರ್ಜಿಯಾ, 87 ಎಸೆತಗಳಲ್ಲಿ 101 ರನ್ ಬಾರಿಸಿದರು. ಇವರಿಬ್ಬರು 2ನೇ ವಿಕೆಟ್ ಪಾಲುದಾರಿಕೆಯಲ್ಲಿ 92 ರನ್ ಗಳಿಸಿದರು.
.ICC Championship: ಆಸ್ಟ್ರೇಲಿಯಾ ಎದುರು 100 ರನ್ಗೆ ಆಲೌಟ್ ಆದ ಭಾರತದ ವನಿತೆಯರು.WTC Ranking: ಆಸೀಸ್ ವಿರುದ್ಧ ಹೀನಾಯ ಸೋಲು; 3ನೇ ಸ್ಥಾನಕ್ಕೆ ಕುಸಿದ ಭಾರತ.
ಜಾರ್ಜಿಯಾ ಔಟಾದ ನಂತರ ಬಂದ ಅನುಭವಿ ಬ್ಯಾಟರ್ ಬೆತ್ ಮೂನಿ (56 ರನ್) ಸಹ ಬಿರುಸಿನ ಅರ್ಧಶತಕ ಗಳಿಸಿ ಮಿಂಚಿದರು. ಹೀಗಾಗಿ, ಆತಿಥೇಯ ಪಡೆ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 371 ರನ್ ಪೇರಿಸಿತು.

ತಲೆನೋವಾದ ಬ್ಯಾಟಿಂಗ್ ವೈಫಲ್ಯ
ಪ್ರಮುಖ ಆಟಗಾರ್ತಿಯರು ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸುತ್ತಿರುವುದು ಟೀಂ ಇಂಡಿಯಾಗೆ ತಲೆನೋವಾಗಿದೆ. ಲಯ ಕಂಡುಕೊಳ್ಳಲು ಪರದಾಡುತ್ತಿರುವ ಸ್ಫೋಟಕ ಶೈಲಿಯ ಬ್ಯಾಟರ್ ಶಫಾಲಿ ವರ್ಮಾ ಅವರನ್ನು ಈ ಟೂರ್ನಿಯಿಂದ ಕೈಬಿಡಲಾಗಿದೆ.

ಅವರ ಬದಲು ಮೊದಲ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದ ಪ್ರಿಯಾ ಪುನಿಯಾ ಕೇವಲ 3 ರನ್ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಅವರ ಬದಲು ರಿಚಾ ಘೋಷ್, ಅಗ್ರ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದರು.

ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಕೇವಲ 100 ರನ್ ಗಳಿಗೆ ಆಲೌಟ್ ಆಗಿತ್ತು.

ಭಾರತದ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಸಜ್ಜಾಗಲು, ಐಸಿಸಿ ಚಾಂಪಿಯನ್ಷಿಪ್ ಉತ್ತಮ ವೇದಿಕೆಯಾಗಿದೆ.

ಚಾಂಪಿಯನ್ಷಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯುವ ಐದು ತಂಡಗಳು ವಿಶ್ವಕಪ್ಗೆ ನೇರವಾಗಿ ಪ್ರವೇಶ ಪಡೆಯಲಿವೆ.

ಆತಿಥ್ಯ ವಹಿಸಿರುವ ಭಾರತಕ್ಕೆ ನೇರವಾಗಿ ವಿಶ್ವಕಪ್ ಟಿಕೆಟ್ ಸಿಗಲಿದೆಯಾದರೂ, ಎಲ್ಲ ವಿಭಾಗಗಳಲ್ಲಿ ಸುಧಾರಣೆ ಕಂಡುಕೊಳ್ಳಲು ಅವಕಾಶವಿದೆ. ಆಸಿಸ್ ಎದುರಿನ ಅಂತಿಮ ಪಂದ್ಯದಲ್ಲಾದರೂ, ಸಾಮರ್ಥ್ಯಕ್ಕೆ ತಕ್ಕ ಆಟವಾಡುವುದು ಅನಿವಾರ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.