ಗುರುವಾರ , ಅಕ್ಟೋಬರ್ 22, 2020
23 °C

ಡೀನ್ ಜೋನ್ಸ್‌ಗೆ ಎಂಸಿಜಿಯಲ್ಲಿ ಅಂತಿಮ ನಮನ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್ : ಹೋದ ತಿಂಗಳು ನಿಧನರಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗರ ಡೀನ್ ಜೋನ್ಸ್‌(59) ಅವರ ಅಂತ್ಯಕ್ರಿಯೆಯನ್ನು ಬುಧವಾರ ನೆರವೇರಿಸಲಾಯಿತು.

ಮುಂಬೈನ  ಹೋಟೆಲ್‌ನಲ್ಲಿ ಅವರು ಹೃದಯಸ್ಥಂಭನದಿಂದ ನಿಧನರಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ವೀಕ್ಷಕ ವಿವರಣೆಗಾರರಾಗಿ ಅವರು ಸ್ಟಾರ್ ಸ್ಫೋರ್ಟ್ಸ್‌ ವಾಹಿನಿಯಲ್ಲಿ ಕಾರ್ಯನಿರ್ವಹಿಸಲು ಮುಂಬೈನಲ್ಲಿದ್ದರು.

ಅವರ ಪಾರ್ಥಿವ ಶರೀರವನ್ನು ಭಾರತದಲ್ಲಿ ಸಿದ್ಧಪಡಿಸಿದ ಕಾಫಿನ್ ಬಾಕ್ಸ್‌ನಲ್ಲಿ  ಅವರ ತವರೂರಿಗೆ ಕಳಿಸಿ ವಿಶೇಷ ಗೌರವ ಸಲ್ಲಿಸಲಾಗಿತ್ತು. ಅಂತ್ಯಕ್ರಿಯೆಗೂ ಮುನ್ನ ಅಲಂಕೃತ ವಾಹನದಲ್ಲಿ ಜೋನ್ಸ್‌ ದೇಹವನ್ನು ಇರಿಸಿ ಮೆಲ್ಬರ್ನ್ ಕ್ರಿಕೆಟ್ ಅಂಗಳದಲ್ಲಿ  ಒಂದು ಸುತ್ತು ಮೆರವಣಿಗೆ ಮಾಡಲಾಯಿತು. ಅವರ ಟೆಸ್ಟ್‌ ಪದಾರ್ಪಣೆಯ ಕ್ಯಾಪ್‌ನ 324 ಸಂಖ್ಯೆಯನ್ನು ವಾಹನದ ಮೇಲೆ ಚಿತ್ತಾರ ಬಿಡಿಸಲಾಗಿತ್ತು. ಈ ಸಂದರ್ಭದಲ್ಲಿ  ಡೀನ್ ಅವರ ಪತ್ನಿ ಜೇನ್, ಪುತ್ರಿಯರಾದ ಇಸಾಬೆಲ್ಲಾ ಮತ್ತು ಪೊಬಾ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು. ಕೋವಿಡ್ –19 ತಡೆ ನಿಯಮಾವಳಿ ಅನ್ವಯ ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಿರಲಿಲ್ಲ.

ಈ ವಿಧಿವಿಧಾನಗಳ ವಿಡಿಯೊವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮಾಡಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು