ಸಿಡ್ನಿ: ಕೊಕೇನ್ ಪೂರೈಕೆ ವ್ಯವಹಾರದಲ್ಲಿ ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಸ್ಟುವರ್ಟ್ ಮೆಕ್ಗಿಲ್ ಅವರಿಗೆ ಸಿಡ್ನಿ ನ್ಯಾಯಾಲಯದ ನ್ಯಾಯಾಧೀಶರು ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಿದ್ದಾರೆ.

ಆದರೆ 54 ವರ್ಷ ವಯಸ್ಸಿನ ಲೆಗ್ ಸ್ಪಿನ್ನರ್ಗೆ ಅವರಿಗೆ ಸತ್ಪ್ರಜೆಯಾಗಿ ತಿದ್ದಿಕೊಳ್ಳಲು ಅವಕಾಶ ನೀಡಿದ್ದು, ಅವರು ಒಂದು ವರ್ಷ 10 ತಿಂಗಳ ಕಾಲ ಸಾಮುದಾಯಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಮೆಕ್ಗಿಲ್ ಅವರು 495 ಗಂಟೆಗಳ ಕಾಲ ಅವರು ಈ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ಮದ್ಯಪಾನ ಮತ್ತು ಮಾದಕವಸ್ತು ಸೇವನೆಯಿಂದ ದೂರವಿರಬೇಕಾಗುತ್ತದೆ ಎಂದು ನ್ಯಾಯಾಧೀಶರಾದ ನಿಕೋಲ್ ನೋಮನ್ ಆದೇಶದಲ್ಲಿ ತಿಳಿಸಿದ್ದಾರೆ.

ಕೊಕೇನ್ ಖರೀದಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿರುವುದು ಸಾಬೀತುಗೊಂಡಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾಗಿ ಪ್ರಸಾರಮಾಧ್ಯಮ ಸಂಸ್ಥೆ ಎಬಿಸಿ ತಿಳಿಸಿದೆ.

ಈ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಮಾರ್ಚ್ನಲ್ಲಿ ನ್ಯಾಯಾಲಯ ತಿಳಿಸಿತ್ತು. 2021ರಲ್ಲಿ ಅವರು ತಮಗೆ ಪರಿಚಿತರಾದ ಕೊಕೇನ್ ಪೂರೈಕೆದಾರರೊಬ್ಬರನ್ನು ಸಹವರ್ತಿಯೊಬ್ಬರಿಗೆ ಪರಿಚಯಿಸಿದ್ದರು. ಅಂತಿಮವಾಗಿ ₹1.70 ಕೋಟಿ ಮೊತ್ತಕ್ಕೆ ಕೊಕೇನ್ ಖರೀದಿಯಾಗಿತ್ತು.

ಅಂತಿಮ ವ್ಯವಹಾರದಲ್ಲಿ ಮೆಕ್ಗಿಲ್ ಪಾತ್ರ ಇರಲಿಲ್ಲವಾದರೂ, ಗೊತ್ತಿದ್ದೂ ನಿಷೇಧಿತ ಉದ್ದೀಪನ ಮದ್ದಿನ ಪೂರೈಕೆಯಲ್ಲಿ ತೊಡಗಿದ್ದ ಪ್ರಕರಣದಲ್ಲಿ ಅವರನ್ನು ನ್ಯಾಯಾಧೀಶರು ದೋಷಿ ಎಂದು ಪರಿಗಣಿಸಿದ್ದರು.

ಮೆಕ್ಗಿಲ್ 1998 ರಿಂದ 2008ರ ಅವಧಿಯಲ್ಲಿ 44 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.