ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ಗಿಂತಲೂ ಬಿಬಿಎಲ್ ಅತ್ಯುತ್ತಮ ಎಂದ ಬಾಬರ್‌ಗೆ ಹರಭಜನ್ ತಿರುಗೇಟು

Last Updated 17 ಮಾರ್ಚ್ 2023, 10:09 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಸ್ಟ್ರೇಲಿಯಾದ ಬಿಗ್ ಬಾಷ್ ಲೀಗ್‌ನೊಂದಿಗೆ ಹೋಲಿಕೆ ಮಾಡುವ ಮೂಲಕ ಪಾಕಿಸ್ತಾನದ ನಾಯಕ ಬಾಬರ್ ಆಜಂ ಪೇಚಿಗೆ ಸಿಲುಕಿದ್ದಾರೆ.

ಇದಕ್ಕೆ ಕ್ರಿಕೆಟ್ ಪ್ರೇಮಿಗಳಿಂದ ಟೀಕೆ ವ್ಯಕ್ತವಾಗಿದ್ದು, ಭಾರತದ ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಸಹ ಪ್ರತಿಕ್ರಿಯಿಸಿದ್ದಾರೆ.

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆದ ಐಪಿಎಲ್ ಹಾಗೂ ಬಿಗ್ ಬಾಷ್ ನಡುವೆ ಯಾವ ಟೂರ್ನಿ ಅತ್ಯುತ್ತಮ ಎಂಬ ಪ್ರಶ್ನೆ ಬಾಬರ್‌ಗೆ ಎದುರಾಗಿತ್ತು.

ಇದಕ್ಕೆ ಉತ್ತರಿಸಿದ ಬಾಬರ್, ಆಸ್ಟ್ರೇಲಿಯಾದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲಿ ವೇಗಿ ಸ್ನೇಹಿ ಪಿಚ್ ಇದ್ದು, ನೀವು ಬಹಳಷ್ಟು ಕಲಿಯುವಿರಿ. ಆದರೆ ಐಪಿಎಲ್‌ನಲ್ಲಿ ಅದೇ ಏಷ್ಯಾದ ಪಿಚ್‌ಗಳನ್ನು ಗಿಟ್ಟಿಸುವಿರಿ ಎಂದು ಬಾಬರ್ ಹೇಳಿದ್ದಾರೆ.

ಇದಕ್ಕೆ ತಮಾಷೆ ಮಾಡುವ ಎಮೋಜಿ ಹಾಕಿ ಹರಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಬಹುನಿರೀಕ್ಷಿತ ಐಪಿಎಲ್ ಟೂರ್ನಿಯು ಮಾರ್ಚ್ 31ರಂದು ಆರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT