ಸೋಮವಾರ, ಮಾರ್ಚ್ 8, 2021
27 °C

ವಿಶ್ವಕಪ್‌ ಟೂರ್ನಿ: ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆನಿಂಗ್ಟನ್ ಓವಲ್, ಲಂಡನ್ (ಎಎಫ್‌ಪಿ): ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿನ ನಗೆ ಬೀರಿತು.

ಶಕೀಬ್ ಅಲ್ ಹಸನ್ (64; 68ಎಸೆತ, 7ಬೌಂಡರಿ) ಅವರ ಅರ್ಧಶತಕ ವ್ಯರ್ಥವಾಯಿತು. 

ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಮ್ಯಾಟ್ ಹೆನ್ರಿ (47ಕ್ಕೆ4) ಮತ್ತು ಟ್ರೆಂಟ್‌ ಬೌಲ್ಟ್‌ (44ಕ್ಕೆ2) ಅವರ ಬಿರುಗಾಳಿ ವೇಗಕ್ಕೆ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೂ ದಿಟ್ಟತನದಿಂದ ಬ್ಯಾಟ್ ಬೀಸಿದ ಶಕೀಬ್ (64; 68ಎಸೆತ, 7ಬೌಂಡರಿ)  ನೆರವಿನಿಂದ 49.2 ಓವರ್‌ಗಳಲ್ಲಿ 244 ರನ್‌ ಗಳಿಸಿತು.

ಬಾಂಗ್ಲಾದ ಆರಂಭಿಕ ಜೋಡಿ ತಮೀಮ್ ಇಕ್ಬಾಲ್ ಮತ್ತು ಸೌಮ್ಯ ಸರ್ಕಾರ್ ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 45 ರನ್‌ ಪೇರಿಸಿದರು. ಸೌಮ್ಯ ಸರ್ಕಾರ ವಿಕೆಟ್ ಕಬಳಿಸಿದ ಮ್ಯಾಟ್‌ ಹೆನ್ರಿ ಈ ಜೊತೆಯಾಟವನ್ನು ಮುರಿದರು.

ತಮೀಮ್ ಇಕ್ಬಾಲ್ ಅವರನ್ನು ಲಾಕಿ ಫರ್ಗ್ಯುಸನ್ ಔಟ್ ಮಾಡಿದರು. ಶಕೀಬ್ ಜೊತೆಗೂಡಿ ಉತ್ತಮವಾಗಿ ಆಡುತ್ತಿದ್ದ ಮುಷ್ಫಿಕರ್ ರಹೀಮ್ (19 ರನ್) ಅವರನ್ನು ಮಾಟ್ಟಿನ್ ಗಪ್ಟಿಲ್ ಅವರು ತಮ್ಮ ಚುರುಕಿನ ಫೀಲ್ಡಿಂಗ್‌ ಮೂಲಕ ರನ್‌ಔಟ್ ಮಾಡಿದರು.

ಮೊಹಮ್ಮದ್ ಮಿಥುನ್ (26), ಮೊಹಮ್ಮದ್ ಸೈಫುದ್ದೀನ್ (29) ಅವರ ವಿಕೆಟ್‌ಗಳನ್ನೂ  ಹೆನ್ರಿ ಕಬಳಿಸಿದರು.

ರಾಸ್‌ ಟೇಲರ್ 82 ರನ್‌ ಗಳಿಸಿ ಪಂದ್ಯದ ಗೆಲುವಿಗೆ ಕಾರಣರಾದರು. ಪಂದ್ಯದ ಅಂತಿಮ ಘಟ್ಟದಲ್ಲಿ ಬಾಂಗ್ಲಾದೇಶ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರಾದರೂ ಪಂದ್ಯ ಗೆಲ್ಲುವಲ್ಲಿ ವಿಫಲರಾದರು. 

ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ: 49.2 ಓವರ್‌ಗಳಲ್ಲಿ 244 (ತಮೀಮ್ ಇಕ್ಬಾಲ್ 24, ಸೌಮ್ಯ ಸರ್ಕಾರ್ 25, ಶಕೀಬ್ ಅಲ್ ಹಸನ್ 64, ಮೊಹಮ್ಮದ್ ಮಿಥುನ್ 26, ಮೆಹಮುದುಲ್ಲಾ 20, ಮೊಹಮ್ಮದ್ ಸೈಫುದ್ದೀನ್ 23, ಮ್ಯಾಟ್ ಹೆನ್ರಿ 41ಕ್ಕೆ2, ಟ್ರೆಂಟ್ ಬೌಲ್ಟ್ 36ಕ್ಕೆ1, ಲಾಕಿ ಫರ್ಗ್ಯುಸನ್ 40ಕ್ಕೆ1, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 39ಕ್ಕೆ1, ಮಿಷೆಲ್ ಸ್ಯಾಂಟನರ್ 41ಕ್ಕೆ1) 

ನ್ಯೂಜಿಲೆಂಡ್: 47.1 ಓವರ್‌ಗಳಲ್ಲಿ 248/8 

ಫಲಿತಾಂಶ: ನ್ಯೂಜಿಲೆಂಡ್‌ಗೆ 2 ವಿಕೆಟ್‌ ಗೆಲುವು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು