ಶನಿವಾರ, ಜೂನ್ 25, 2022
25 °C

ಫರ್ನಾಂಡೊ, ಕರುಣರತ್ನೆ ಸುಂದರ ಬ್ಯಾಟಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಅರ್ಧಶತಕ ಗಳಿಸಿದ ಒಷಾಡ ಫರ್ನಾಂಡೊ ಮತ್ತು ದಿಮುತ ಕರುಣರತ್ನೆ ಅವರ ಬ್ಯಾಟಿಂಗ್ ಬಲದಿಂದ ಶ್ರೀಲಂಕಾ ತಂಡವು ಬಾಂಗ್ಲಾದೇಶದ ಎದುರು ದಿಟ್ಟ ತಿರುಗೇಟು ನೀಡಿದೆ.

ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ ತಂಡವು ಗಳಿಸಿರುವ 365 ರನ್‌ಗಳಿಗೆ ಲಂಕಾ ತಕ್ಕ ಪ್ರತ್ಯುತ್ತರ ನೀಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಲಂಕಾ ತಂಡವು 46 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 141 ರನ್ ಗಳಿಸಿದೆ. ಆತಿಥೇಯ ತಂಡವು  ಮುಷ್ಫಿಕುರ್ ರಹೀಂ  (175 ರನ್) ಮತ್ತು ಲಿಟನ್ ದಾಸ್ (141 ರನ್) ಅವರ ದ್ವಿಶತಕದ ಜೊತೆಯಾಟದ ಬಲದಿಂದ ಗೌರವಯುತ ಮೊತ್ತ ಗಳಿಸಿತು. ಮೊದಲ ದಿನದಾಟದಲ್ಲಿ  ಐದು ವಿಕೆಟ್‌ಗಳಿಗೆ 277 ರನ್ ಗಳಿಸಿದ್ದ ತಂಡವು ಮಂಗಳವಾರ ದೊಡ್ಡ ಮೊತ್ತ ಪೇರಿಸುವ ಪ್ರಯತ್ನದಲ್ಲಿತ್ತು. ಆದರೆ, ಲಂಕಾ ತಂಡದ ಬೌಲರ್ ಕಸುನ್ ರಜಿತಾ (64ಕ್ಕೆ5) ಮತ್ತು ಅಷಿತಾ ಫರ್ನಾಂಡೊ (93ಕ್ಕೆ4) ಅವರ ಉತ್ತಮ ದಾಳಿ ನಡೆಸಿದರು. 

ಬ್ಯಾಟಿಂಗ್ ಆರಂಭಿಸಿದ ಲಂಕಾ ತಂಡಕ್ಕೆ ಒಷಾಡ ಫರ್ನಾಂಡೊ (57 ರನ್) ಮತ್ತು ದಿಮುತ ಕರುಣರತ್ನೆ (ಬ್ಯಾಟಿಂಗ್ 70) ಉತ್ತಮ ಅಡಿಪಾಯಿ ಹಾಕಿದರು.  

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಬಾಂಗ್ಲಾದೇಶ
: 116.2 ಓವರ್‌ಗಳಲ್ಲಿ 365 (ಮುಷ್ಫಿಕುರ್ ರಹೀಂ ಔಟಾಗದೆ 175, ಲಿಟನ್ ದಾಸ್ 141, ತೈಜುಲ್ ಇಸ್ಲಾಂ 15, ಕಸುನ್ ರಜಿತಾ 64ಕ್ಕೆ5, ಅಷಿತಾ ಫರ್ನಾಂಡೊ 93ಕ್ಕೆ4)

ಶ್ರೀಲಂಕಾ: 46 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 143 (ಒಷಾಡ ಫರ್ನಾಂಡೊ 57, ದಿಮುತ ಕರುಣರತ್ನೆ ಬ್ಯಾಟಿಂಗ್ 70, ಇಬಾದತ್ ಹುಸೇನ್ 31ಕ್ಕೆ1, ಶಕೀಬ್ ಅಲ್ ಹಸನ್ 19ಕ್ಕೆ1) 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು