ಗುರುವಾರ , ಜುಲೈ 29, 2021
20 °C

ಲೈಂಗಿಕ ಕಿರುಕುಳ | ಮಹಿಳಾ ತಂಡದ ಕೋಚ್‌ ಹುದ್ದೆಯಿಂದ ಬೆಡಾಡೆ ವಜಾ

ಪಿಟಿಐ Updated:

ಅಕ್ಷರ ಗಾತ್ರ : | |

ವಡೋದರಾ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಅತುಲ್ ಬೆಡಾಡೆ ಅವರನ್ನು ಬರೋಡಾ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಯಿಂದ ವಜಾ ಮಾಡಲಾಗಿದೆ.

ಹೋದ ಮಾರ್ಚ್‌ನಲ್ಲಿ ತಂಡದ ಕೆಲವು ಆಟಗಾರ್ತಿಯರು ದೂರು ನೀಡಿದ್ದರಿಂದ ಅತುಲ್ ಅವರನ್ನು ಅಮಾನತಿನಲ್ಲಿಡಲಾಗಿತ್ತು. ಮಂಗಳವಾರ ನಡೆದ ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ  ಈ ಪ್ರಕರಣದ ಕುರಿತು ಚರ್ಚೆ ನಡೆಯಿತು.

‘ಮಹಿಳಾ ತಂಡದ ಕೋಚ್ ಅತುಲ್ ಅವರ ವಿರುದ್ಧ ದೂರು ಬಂದಿತ್ತು. ಅವರು ಲೈಂಗಿಕ ಕಿರುಕುಳ ಮತ್ತು ಅವಹೇಳನಕಾರಿಯಾಗಿ ಮಾತನಾಡಿದ್ದರೆಂದು ಕೆಲವು ಆಟಗಾರ್ತಿಯರು ದೂರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕರು ಪ್ರಾಥಮಿಕ ತನಿಖೆ ನಡೆಸಿದ್ದರು. ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ ಅಧಿಕಾರಿಗಳು ವಿವರಣೆ ನೀಡಿದರು. ಜೊತೆಗೆ ಮುಂದಿನ ಕ್ರಮಗಳ ಬಗ್ಗೆ ಶಿಫಾರಸುಗಳನ್ನೂ ಮಾಡಿದರು. ಅದಕ್ಕನುಗುಣವಾಗಿ ಅತುಲ್ ಅಮಾನತು ಶಿಕ್ಷೆಯನ್ನು ಹಿಂಪಡೆಯಲಾಗಿದೆ.  ಆದರೆ ಅವರನ್ನು ಕೋಚ್ ಸ್ಥಾನದಿಂದ ಕೈಬಿಡಲಾಗಿದೆ’ ಎಂದು ಬರೋಡಾ ಕ್ರಿಕೆಟ್ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅತುಲ್ ಅವರು ಭಾರತ ತಂಡವನ್ನು 13 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. 

ಮಹಿಳಾ ತಂಡಕ್ಕೆ ಹಿರಿಯ ಆಟಗಾರ್ತಿ ಅಂಜು ಜೈನ್ ಅವರನ್ನು ನೂತನ ಕೋಚ್ ಆಗಿ ನೇಮಕ ಮಾಡುವ ಸಾಧ್ಯತೆ ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು