ಶನಿವಾರ, ಆಗಸ್ಟ್ 13, 2022
23 °C

‘ಕ್ರೆಡ್‌’ಗೆ ಐಪಿಎಲ್‌ ಪ್ರಾಯೋಜಕತ್ವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರೆಡಿಟ್‌ ಕಾರ್ಡ್‌ ಪಾವತಿ ಆ್ಯಪ್‌ ಕಂಪನಿ ‘ಕ್ರೆಡ್’‌ಅನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮುಂದಿನ ಮೂರು ಆವೃತ್ತಿಗಳಿಗೆ‌ ಪ್ರಾಯೋಜ‌ಕತ್ವ ಪಾಲುದಾರನಾಗಿ ಬಿಸಿಸಿಐ ಬುಧವಾರ ಸೇರ್ಪಡೆ ಮಾಡಿದೆ.

13ನೇ ಆವೃತ್ತಿಯ ಐಪಿಎಲ್‌ ಕ್ರಿಕೆಟ್‌ ಟೂರ್ನಿಯು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಎಮಿರೇಟ್ಸ್‌ನಲ್ಲಿ (ಯುಎಇ) ಸೆಪ್ಟೆಂಬರ್ 19ರಿಂದ ನಿಗದಿಯಾಗಿದೆ.

‘ಕ್ರೆಡ್‌ ಕಂಪನಿಯನ್ನು ಐಪಿಎಲ್‌ನ ಪಾಲುದಾರನಾಗಿ ಹೊಂದುತ್ತಿರುವುದಕ್ಕೆ ಖುಷಿ ಎನಿಸುತ್ತದೆ‘ ಎಂದು ಐಪಿಎಲ್‌ ಆಡಳಿತ ಮಂಡಳಿ ಮುಖ್ಯಸ್ಥ ಬ್ರಿಜೇಶ್ ಪಟೇಲ್‌ ಹೇಳಿದ್ದಾರೆ.

ಕ್ರೆಡ್‌ನ ಪಾಲುದಾರಿಕೆ 2022ರ ಆವೃತ್ತಿಯವರೆಗೆ ಇರಲಿದೆ.

ಈ ಮೊದಲು ಬೆಂಗಳೂರು ಮೂಲದ ಶಿಕ್ಷಣ ಮತ್ತು ತಂತ್ರಜ್ಞಾನ ಸಂಸ್ಥೆ ಅನ್‌ಅಕಾಡೆಮಿಗೂ ಪ್ರಾಯೋಜಕತ್ವ ನೀಡಲಾಗಿತ್ತು. ಡ್ರೀಮ್ ಇಲೆವನ್ ಫ್ಯಾಂಟಸಿ ಗೇಮ್‌ ಕಂಪನಿಯು ಈ ಬಾರಿಯ ಟೂರ್ನಿಗೆ ಟೈಟಲ್‌ ಪ್ರಾಯೋಜಕತ್ವ ಹಕ್ಕು ಪಡೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು