ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಪೆಕ್ಸ್ ಕೌನ್ಸಿಲ್ ಸಭೆಯು ಇದೇ 17ರಂದು ನಡೆಯಲಿದೆ.

ಕಳೆದ ಮೇ 6ರಂದು ಆನ್ಲೈನ್ನಲ್ಲಿ ಸಮಿತಿಯ ಸಭೆ ನಡೆದಿತ್ತು. ಅದೇ ರೀತಿ ಮುಂಬರಲಿರುವ ಸಭೆಯನ್ನೂ ಆನ್ಲೈನ್ ಮೂಲಕವೇ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಐಪಿಎಲ್ನಲ್ಲಿ ಚೀನಾ ಕಂಪೆನಿಯ ಪ್ರಾಯೋಜಕತ್ವ, ಭಾರತ ತಂಡದ ಭವಿಷ್ಯದ ಕ್ರಿಕೆಟ್ ವೇಳಾಪಟ್ಟಿಯ ಪರಿಷ್ಕರಣೆ ಕುರಿತ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.

ಐಪಿಎಲ್ ಪ್ರಾಯೋಜಕತ್ವ ಒಪ್ಪಂದದ ಕುರಿತು ಐಪಿಎಲ್ ಆಡಳಿತ ಸಮಿತಿಯು ಮುಂದಿನ ವಾರದ ನಡೆಯುವ ಸಭೆಯಲ್ಲಿ ಮರುಪರಿಶೀಲನೆ ನಡೆಸಲಿದೆ. ಅಪೆಕ್ಸ್ ಕೌನ್ಸಿಲ್ನ ಒಂಬತ್ತು ಸದಸ್ಯರು ತಮ್ಮ ಸಭೆಯಲ್ಲಿ ಆ ಕುರಿತು ಸಲಹೆಗಳನ್ನು ನೀಡುವ ಸಾಧ್ಯತೆ ಇದೆ.

ದೇಶಿ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯ ಸಿದ್ಧತೆಯ ಕುರಿತು ಪ್ರಮುಖ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ, ಸೆಪ್ಟೆಂಬರ್–ಅಕ್ಟೋಬರ್ನಲ್ಲಿ ಐಪಿಎಲ್ ಆಯೋಜನೆಗೊಳ್ಳುವುದು ಖಚಿತವಾದರೆ ರಣಜಿ ಟೂರ್ನಿ ಸೇರಿದಂತೆ ದೇಶಿ ಟೂರ್ನಿಗಳ ವೇಳಾಪಟ್ಟಿಯೂ ಬದಲಾವಣೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.