ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BCCI Awards: ರವಿ ಶಾಸ್ತ್ರಿ, ಫಾರೂಕ್ ಇಂಜಿನಿಯರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

Published 23 ಜನವರಿ 2024, 16:17 IST
Last Updated 23 ಜನವರಿ 2024, 16:17 IST
ಅಕ್ಷರ ಗಾತ್ರ

ಹೈದರಾಬಾದ್: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಜೀವಮಾನದ ಸಾಧನೆ ಪ್ರಶಸ್ತಿಗೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ಮಾಜಿ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಭಾಜನರಾಗಿದ್ದಾರೆ.

ಉದಯೋನ್ಮುಖ ಕ್ರಿಕೆಟಿಗ ಶುಭಮನ್ ಗಿಲ್ ಅವರು 2022-23ನೇ ಸಾಲಿನ 'ವರ್ಷದ ಕ್ರಿಕೆಟಿಗ' ಪ್ರಶಸ್ತಿ ಪಡೆದಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು.

ಬಿಸಿಸಿಐ ಪ್ರಶಸ್ತಿ ಪಟ್ಟಿ ಇಂತಿದೆ:

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅತ್ಯುತ್ತಮ ಪದಾರ್ಪಣೆ:

  • 2019-20: ಮಯಂಕ್ ಅಗರವಾಲ್

  • 2020-21: ಅಕ್ಷರ್ ಪಟೇಲ್

  • 2021-22: ಶ್ರೇಯಸ್ ಅಯ್ಯರ್

  • 2022-23: ಯಶಸ್ವಿ ಜೈಸ್ವಾಲ್

ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗ (ಪಾಲಿ ಉಮ್ರಿಗಾರ್ ಪ್ರಶಸ್ತಿ)

  • 2019- 20: ಮೊಹಮ್ಮದ್ ಶಮಿ

  • 2020-21: ಆರ್. ಅಶ್ವಿನ್

  • 2021-22: ಜಸ್‌ಪ್ರೀತ್ ಬೂಮ್ರಾ

  • 2022-23: ಶುಭಮನ್ ಗಿಲ್

ದಿಲೀಪ್ ಸರ್ದೇಸಾಯಿ ಪ್ರಶಸ್ತಿ:

  • ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ - 2022-23 (ಭಾರತ vs ವೆಸ್ಟ್‌ಇಂಡೀಸ್): ಆರ್. ಅಶ್ವಿನ್

  • ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ - 2022-23 (ಭಾರತ vs ವೆಸ್ಟ್‌ಇಂಡೀಸ್): ಯಶಸ್ವಿ ಜೈಸ್ವಾಲ್.

ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ:

ಫಾರೂಕ್ ಇಂಜಿನಿಯರ್ ಮತ್ತು ರವಿಶಾಸ್ತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT