ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐಗೆ ಪೇಟಿಎಂ ಪ್ರಾಯೋಜಕತ್ವ

Last Updated 23 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ 2023 ರವರೆಗೆ ನಡೆಯಲಿರುವ ದೇಶಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳ ಮುಖ್ಯ ಪ್ರಾಯೋಜಕತ್ವವನ್ನು ಪೇಟಿಎಂ ಡಿಜಿಟಲ್ ಹಣಕಾಸು ಸಂಸ್ಥೆಯು ಪಡೆದುಕೊಂಡಿದೆ.

ಈ ಕುರಿತು ಪ್ರಕಟಣೆ ನೀಡಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡ ಳಿಯು ಮುಂದಿನ ನಾಲ್ಕು ವರ್ಷಗಳಲ್ಲಿ ಪೇಟಿಎಂ ₹ 326.80 ಕೋಟಿ ಮೊತ್ತ ನೀಡಲಿದೆ.

2015ರಲ್ಲಿ ಭಾರತ ತಂಡದ ಮುಖ್ಯ ಪ್ರಾಯೋಜಕತ್ವವನ್ನು ಸಂಸ್ಥೆ ಪಡೆದಿತ್ತು. ಇದಕ್ಕೂ ಮುನ್ನ ಮೈಕ್ರೊಮ್ಯಾಕ್ಸ್‌ ಸಂಸ್ಥೆಯು ಪ್ರತಿ ಪಂದ್ಯಕ್ಕೆ ₹ 2.2 ಕೋಟಿ ನೀಡುತ್ತಿತ್ತು. ಬಳಿಕ 2.4 ಕೋಟಿ ರೂ. (ಪ್ರತಿ ಪಂದ್ಯಕ್ಕೆ) ಮೊತ್ತ ನೀಡಿ ಪೇಟಿಯಂ ಈ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಬಿಸಿಸಿಐ ಮತ್ತು ಪೇಟಿಯಂ ಜೊತೆಗಿನ ಒಪ್ಪಂದ ಈಚೆಗೆ ಅಂತ್ಯಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT