ಆಧುನಿಕ ತಂತ್ರಜ್ಞಾನ ಮತ್ತು ತಂತ್ರಾಂಶಗಳ ಮೂಲಕ ಬಿಸಿಸಿಐ ಸಿದ್ಧಪಡಿಸಿರುವ ಸಿಸ್ಟಮ್ ಇದಾಗಿದೆ. ಇದರ ಮೂಲಕ ಆಟಗಾರರ ಫಿಟ್‌ನೆಸ್, ಸಾಧನೆಗಳು, ಗಾಯದ ಚಿಕಿತ್ಸೆ–ನಿರ್ವಹಣೆ, ತಾಲೀಮು, ಕೋಚ್‌ಗಳ ಕಾರ್ಯಶೈಲಿ ಮತ್ತು ಆಡಳಿತದ ವಿಶ್ಲೇಷಣೆಗಳ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ. ಮೊಬೈಲ್ ಅಪ್ಲಿಕೇಷನ್ (ಆ್ಯಪ್) ಮೂಲಕ ಈ ದತ್ತಾಂಶ ಪಡೆಯಲಾಗುತ್ತದೆ. ಈ ಆ್ಯಪ್ ಮೂಲಕವೇ ಆಟಗಾರರಿಗೆ ಅಲರ್ಟ್‌ಗಳನ್ನು ನೀಡಲಾಗುತ್ತದೆ. ಇದರಿಂದ ಪ್ರತಿಯೊಬ್ಬ ಆಟಗಾರನ ಕುರಿತ ಸಮಗ್ರ ಮಾಹಿತಿಯನ್ನು ಕಾಲಕಾಲಕ್ಕೆ ಉತ್ಕೃಷ್ಠಗೊಳಿಸಲಾಗುತ್ತದೆ.