ಸಿಡ್ನಿ: ಭಾರತ ತಂಡದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಥಂಡರ್ ತಂಡದ ಪರ ಆಡಲು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಈ ಹಿನ್ನೆಲೆ ಅವರು ಒಲಿಂಪಿಕ್ ಅರೆನಾ ಮೈದಾನದಲ್ಲಿ ಪ್ರಾಕ್ಟಿಸ್ ನಡೆಸಲಿದ್ದು, ಈ ವೇಳೆ ಅವರಿಗೆ ಖಾಸಗಿ ಭದ್ರತೆ ಒದಗಿಸಲಾಗುವುದು ಎಂದು ಫ್ರಾಂಚೈಸಿ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಶ್ವಿನ್ ಅವರು ಖಾಸಗಿ ಯೂಟ್ಯೂಬ್ ಚಾನೆಲ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಕ್ರಮವಾಗಿ 17.5 ಲಕ್ಷ ಚಂದಾದಾರು ಹಾಗೂ 53 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಹಾಗಾಗಿ ಅಶ್ವಿನ್ ಸಿಡ್ನಿ ಥಂಡರ್ ಜೊತೆಗಿನ ತಮ್ಮ ಪಯಣವನ್ನು ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ಗಳಲ್ಲಿ ಅಪ್ಲೋಡ್ ಮಾಡುವುದರಿಂದ, ಅವರು ಮೈದಾನದಲ್ಲಿ ಪ್ರಾಕ್ಟಿಸ್ ಮಾಡುವ ಸ್ಥಳಕ್ಕೆ ಅಭಿಮಾನಿಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಫ್ರಾಂಚೈಸಿ ಅವರಿಗೆ ಖಾಸಗಿ ಭದ್ರತೆ ನೀಡಲು ಮುಂದಾಗಿದೆ.

ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಶ್ವಿನ್ ಅವರಿಗೆ ಪ್ರಾಕ್ಟಿಸ್ ಮಾಡುವ ಸ್ಥಳದಲ್ಲಿ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ಸಿಡ್ನಿ ಥಂಡರ್ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಫ್ರಾಂಚೈಸಿ ತಿಳಿಸಿದೆ.
.ODI ನಾಯಕತ್ವದಿಂದ ರೋಹಿತ್ ಶರ್ಮಾಗೆ ಕೊಕ್: ಆಸಿಸ್ ಸರಣಿಗೆ ಹೊಸ ಕ್ಯಾಪ್ಟನ್.ಜಡೇಜ, ಸಿರಾಜ್ ಮ್ಯಾಜಿಕ್: ಇನಿಂಗ್ಸ್ ಮತ್ತು 140 ರನ್ಗಳಿಂದ ಗೆದ್ದ ಟೀಂ ಇಂಡಿಯಾ.
ಕಳೆದ ವರ್ಷ ಬಾರ್ಡರ್–ಗವಾಸ್ಕರ್ ಟ್ರೋಫಿಯ ಪಿಂಕ್ ಬಾಲ್ ಟೆಸ್ಟ್ ಸಂದರ್ಭದಲ್ಲಿ ಭಾರತೀಯ ಆಟಗಾರರು ತರಬೇತಿ ನಡೆಸುತ್ತಿದ್ದ ಅಡಿಲೇಡ್ನ ಓವಲ್ ಮೈದಾನಕ್ಕೆ ಸುಮಾರು 5000 ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದರು. ಅಶ್ವಿನ್ ಪ್ರಾಕ್ಟಿಸ್ ಮಾಡುವ ಸಂದರ್ಭದಲ್ಲಿ ಕೂಡ ಅಭಿಮಾನಿಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಿಡ್ನಿ ಥಂಡರ್ ಫ್ರಾಂಚೈಸಿ ಅವರಿಗೆ ಖಾಸಗಿ ಭದ್ರತೆ ಒದಗಿಸಲು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.