ಶನಿವಾರ, ಜನವರಿ 29, 2022
24 °C
ಸ್ಕಾಟ್‌ಗೆ ಮಣೆ ಹಾಕಿದ ಆಸ್ಟ್ರೇಲಿಯಾ

ಆ್ಯಷಸ್ ಸರಣಿ | ಇಂದಿನಿಂದ 4ನೇ ಟೆಸ್ಟ್; ಸೋಲಿನ ಸರಪಳಿ ಕಳಚುವುದೇ ಇಂಗ್ಲೆಂಡ್?

ಎಪಿ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಮೆಲ್ಬರ್ನ್‌ ಟೆಸ್ಟ್‌ನಲ್ಲಿ ತಮ್ಮ ಬಿರುಗಾಳಿ ವೇಗದ ದಾಳಿಯಿಂದ ಇಂಗ್ಲೆಂಡ್ ತಂಡವು ಕುಸಿಯಲು ಕಾರಣರಾಗಿದ್ದ ಸ್ಕಾಟ್ ಬೊಲ್ಯಾಂಡ್ ಬುಧವಾರ ಆರಂಭವಾಗಲಿರುವ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ. 

ಗಾಯಗೊಂಡು ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಜೋಶ್ ಹ್ಯಾಜಲ್‌ವುಡ್  ಈ ಪಂದ್ಯಕ್ಕೆ ಮರಳುವ ಸಾಧ್ಯತೆಗಳವೆ ಎಂದು ಹೇಳಲಾಗಿತ್ತು. ಆದರೆ, ಅವರು ಇನ್ನೂ ಫಿಟ್ ಆಗಿರದ ಕಾರಣ ಸ್ಕಾಟ್ ಸ್ಥಾನ ಉಳಿಸಿಕೊಂಡರು. ಮೂರನೇ ಪಂದ್ಯದಲ್ಲಿ ಅವರು ಆರು ವಿಕೆಟ್‌ಗಳನ್ನು ಗಳಿಸಿದ್ದರು. ಕೋವಿಡ್‌ನಿಂದ ಬಳಲುತ್ತಿರುವ ಟ್ರಾವಿಸ್ ಹೆಡ್ ಬದಲು ಉಸ್ಮಾನ್ ಖ್ವಾಜಾ ಸ್ಥಾನ ಗಳಿಸಿದ್ದಾರೆ.

ಐದು ಪಂದ್ಯಗಳ ಸರಣಿಯನ್ನು 3–0ಯಿಂದ ಕೈವಶ ಮಾಡಿಕೊಂಡಿರುವ ಆಸ್ಟ್ರೇಲಿಯಾ ತಂಡ ಈಗ ಕ್ಲೀನ್‌ಸ್ವೀಪ್‌ ಮೇಲೆ ಕಣ್ಣಿಟ್ಟಿದೆ. ಸಿಡ್ನಿ ಪಿಚ್‌ ಪರಿಶೀಲಿಸಿದ ನಂತರ ನೇಥನ್ ಲಯನ್ ಜೊತೆಗೆ ಎರಡನೇ ಸ್ಪಿನ್ನರ್ ಮಿಚ್ ಸ್ವಿಪ್ಸನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಆದರೆ ಸೋತು ಸುಣ್ಣವಾಗಿರುವ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಕೊರೊನಾ ಸೋಂಕಿಗೊಳಗಾಗಿರುವ ಮುಖ್ಯ ಕೋಚ್ ಕ್ರಿಸ್ ಸಿಲ್ವರ್ ವುಡ್ ಪ್ರತ್ಯೇಕವಾಸಕ್ಕೆ ತೆರಳಿದ್ದಾರೆ. ಸಹಾಯಕ ಕೋಚ್ ಗ್ರಹಾಂ ಥೋರ್ಪ್ ಮಾರ್ಗದರ್ಶನದಲ್ಲಿ ತಂಡ ಕಣಕ್ಕಿಳಿಯಲಿದೆ. ಬೌಲಿಂಗ್‌ನಲ್ಲಿ ಒಲಿ ರಾಬಿನ್ಸನ್, ಅನುಭವಿ ಜಿಮ್ಮಿ ಆ್ಯಂಡರ್ಸನ್ ಉತ್ತಮ ಲಯದಲ್ಲಿದ್ದಾರೆ. ಆದರೆ, ನಾಯಕ ಜೋ ರೂಟ್ ಬಿಟ್ಟರೆ ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಆಟವಾಡಿಲ್ಲದಿರುವುದು ತಂಡದ ಚಿಂತೆಯಾಗಿದೆ. ಸಮಾಧಾನಕರ ಗೆಲುವಿಗಾಗಿ ಹೋರಾಡುವ ಒತ್ತಡವೂ ತಂಡದ ಮೇಲೆ ಇದೆ. 

ತಂಡಗಳು
ಆಸ್ಟ್ರೇಲಿಯಾ:
ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಾಬುಷೇನ್, ಸ್ಟೀವ್ ಸ್ಮಿತ್, ಉಸ್ಮಾನ್ ಖ್ವಾಜಾ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಸ್ಕಾಟ್ ಬೊಲ್ಯಾಂಡ್. 

ಇಂಗ್ಲೆಂಡ್: ಜೋ ರೂಟ್ (ನಾಯಕ), ಹಸೀಬ್ ಹಮೀದ್, ಜ್ಯಾಕ್ ಕ್ರಾಲಿ, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಜಾನಿ ಬೆಸ್ಟೊ, ಜೊಸ್ ಬಟ್ಲರ್, ಮಾರ್ಕ್ ವುಡ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜಿಮ್ಮಿ ಆ್ಯಂಡರ್ಸನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು