ಸೋಮವಾರ, ನವೆಂಬರ್ 18, 2019
24 °C

ಕುಲಪತಿಗಳ ಬಾಯಿಗೆ ಬೀಗ ತೆರವು

Published:
Updated:

ಬೆಂಗಳೂರು: ವಿಶ್ವವಿದ್ಯಾಲಯಗಳ ಕುಲಪತಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡುವುದಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಉನ್ನತ ಶಿಕ್ಷಣ ಇಲಾಖೆ ತೆಗೆದುಹಾಕಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಮಂಗಳವಾರ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದು, ಇಂತಹ ಆದೇಶ ನೀಡಿರುವುದಕ್ಕೆ ಆಘಾತ ವ್ಯಕ್ತಪಡಿಸಿದರು.  ‘ಕುಲಪತಿಗಳಿಗೆ ಮಾಧ್ಯಮ ಹೇಳಿಕೆ ನೀಡುವ ಹಕ್ಕು ಇದ್ದೇ ಇದೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆ ತರಲಾಗದು, ನಿರ್ಬಂಧ ಆದೇಶವನ್ನು ತಕ್ಷಣ ಹಿಂಪಡೆಯಲಾಗುತ್ತದೆ’ ಎಂದು ಸಚಿವರು ತಿಳಿಸಿದರು. ನಿರ್ಬಂಧ ಹೇರಿದ್ದರ ಬಗ್ಗೆ ಜೂನ್‌ 19ರಂದು ‘ಪ್ರಜಾವಾಣಿ’ ವರದಿ ಮಾಡಿತ್ತು.

ಕುಲಪತಿ ನೇಮಕ ಪಾರದರ್ಶಕ: ಕುಲಪತಿಗಳ ನೇಮಕದಲ್ಲಿ ಇನ್ನಷ್ಟು ಪಾರದರ್ಶಕತೆ ತರುವುದಕ್ಕಾಗಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಇದೆ. ಪ್ರತ್ಯೇಕ ಶೋಧನಾ ಸಮಿತಿ ರಚನೆ ಬದಲಿಗೆ ಈ ಕ್ಷೇತ್ರದಲ್ಲಿ ಪರಿಣತ
ರಾದವರ ವೇದಿಕೆ ನಿರ್ಮಿಸಿ, ಅವರಿಂದಲೇ ಕುಲಪತಿ ನೇಮಕಾತಿಗೆ ವ್ಯವಸ್ಥೆ ಮಾಡುವ ವಿಚಾರ ಇದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಸಿಂಡಿಕೇಟ್‌ಗಳಿಗೆ ಸಹ ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಪ್ರತಿಕ್ರಿಯಿಸಿ (+)