ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಸಿಸಿ ಹೊಸ ನಿಯಮ: ಕೆನಡಾದ ಕ್ರಿಕೆಟ್ ಆಟಗಾರ್ತಿ ಡಾನಿಯೆಲ್ ಮೆಕ್‌ಗಾಹೆ ನಿವೃತ್ತಿ

Published 22 ನವೆಂಬರ್ 2023, 6:32 IST
Last Updated 22 ನವೆಂಬರ್ 2023, 6:32 IST
ಅಕ್ಷರ ಗಾತ್ರ

ದುಬೈ: ಟ್ರಾನ್ಸ್‌ಜೆಂಡರ್‌ ಕ್ರಿಕೆಟ್‌ ಆಟಗಾರ್ತಿಯರಿಗೆ ಅಂತರರಾಷ್ಟ್ರೀಯ ಮಹಿಳಾ ಟೂರ್ನಿಯಿಂದ ಅವಕಾಶ ನಿರಾಕರಿಸಿ ಐಸಿಸಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಕೆನಡಾದ ಟ್ರಾನ್ಸ್‌ಜೆಂಡರ್‌ ಕ್ರಿಕೆಟ್ ಆಟಗಾರ್ತಿ ಡಾನಿಯೆಲ್ ಮೆಕ್‌ಗಾಹೆ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡ ಮೊದಲ ಟ್ರಾನ್ಸ್‌ಜೆಂಡರ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮೆಕ್‌ಗಾಹೆ ಪಾತ್ರರಾಗಿದ್ದರು.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಮೆಕ್‌ಗಾಹೆ, ‘ನಿವೃತ್ತಿ ಬಿಟ್ಟು ಬೇರೆ ದಾರಿಯಿಲ್ಲ’ ಎಂದು ಹೇಳಿದ್ದಾರೆ.

‘ಐಸಿಸಿಯ ನಿರ್ಧಾರದಿಂದ ಬಹಳ ನಿರಾಶೆಗೊಂಡಿದ್ದೇನೆ. ಇಲ್ಲಿಗೆ ನನ್ನ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಪಯಣ ಮುಗಿದಿದೆ. ಈ ಪಯಣ ಎಷ್ಟು ಬೇಗ ಪ್ರಾರಂಭವಾಯಿತೋ ಅಷ್ಟೇ ಬೇಗ ಮುಗಿದಿದೆ. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಪರಿವರ್ತಿತರಾದವರು ಅಂತರರಾಷ್ಟ್ರೀಯ ಮಹಿಳಾ ಟೂರ್ನಿಗಳಲ್ಲಿ ಆಡುವಂತಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಮಂಗಳವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

ಅಂತರರಾಷ್ಟ್ರೀಯ ಮಹಿಳಾ ಟೂರ್ನಿಗಳಲ್ಲಿ ಋಜುತ್ವ ಕಾಪಾಡಲು ಮತ್ತು ಆಟಗಾರ್ತಿಯರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT