ಮೈಸೂರು: ಹರ್ಷಿಲ್ ( 118; 157 ಎ, 4X18) ಅವರ ಶತಕದ ನೆರವಿನಿಂದ ಕೆಎಸ್‌ಸಿಎ ಕೋಲ್ಟ್ಸ್ ತಂಡವು, ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಡಾ. ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿ ವಿರುದ್ಧ ಹೋರಾಟ ತೋರುತ್ತಿದ್ದು, ಇನಿಂಗ್ಸ್ ಮುನ್ನಡೆಗೆ ಇನ್ನೂ 155 ರನ್ ದೂರದಲ್ಲಿದೆ.

ಡಿ.ವೈ. ಪಾಟೀಲ ಅಕಾಡೆಮಿಯ 452 ರನ್‌ಗೆ ಉತ್ತರವಾಗಿ, ಎಸ್‌ಜೆಸಿಇ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನದಾಟದ ಕೊನೆಗೆ ಕೆಎಸ್‌ಸಿಎ ಕೋಲ್ಟ್ಸ್ ತಂಡವು 6 ವಿಕೆಟ್‌ಗೆ 298 ರನ್ ಕಲೆಹಾಕಿತು.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ಎಂ.ಬಿ. ಶಿವಂ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ ಕೋಲ್ಟ್ಸ್‌ಗೆ ಹರ್ಷಿಲ್ ಆಸರೆ ಆದರು. ಎಸ್.ಯು. ಕಾರ್ತಿಕ್ (57) ಜೊತೆಗೂಡಿ ಎರಡನೇ ವಿಕೆಟ್‌ಗೆ 134 ರನ್ ಜೊತೆಯಾಟದ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. 31ನೇ ಓವರ್‌ನಲ್ಲಿ ಪರೀಕ್ಷಿತ್ ಈ ಜೋಡಿಯನ್ನು ಬೇರ್ಪಡಿಸಿದರು. ನಂತರದಲ್ಲಿ ಕ್ರೀಸ್‌ಗೆ ಬಂದ ಸೃಜನ್ ನಂದನ್ (49) ಕೂಡ ಹರ್ಷಿಲ್‌ಗೆ ಉತ್ತಮ ಸಾಥ್ ನೀಡಿದರು.

ಬುಧವಾರ ಬೆಳಿಗ್ಗೆ ಇನಿಂಗ್ಸ್ ಮುಂದುವರಿಸಿದ ವೈ.ಡಿ. ಪಾಟೀಲ ಅಕಾಡೆಮಿಯು ನಿನ್ನೆಯ ಮೊತ್ತಕ್ಕೆ 36 ರನ್ ಹೆಚ್ಚುವರಿಯಾಗಿ ಸೇರಿಸಿ ಆಲೌಟ್ ಆಯಿತು. ನಾಯಕ ಕರ್ಶ್ ಕೊಠಾರಿ 61 ರನ್ ಗಳಿಸಿ ಅಜೇಯರಾಗಿ ಉಳಿದರು.

ಗೋವಿಂದ ಪೊದ್ದಾರ್‌ಗೆ ನಿರಾಸೆ

ಇಲ್ಲಿನ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ಬರೋಡಾ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ ಬುಧವಾರ ಒಡಿಶಾ ಕ್ರಿಕೆಟ್ ಸಂಸ್ಥೆಯ ಗೋವಿಂದ ಪೊದ್ದಾರ್ ದ್ವಿಶತಕದ ಅಂಚಿನಲ್ಲಿ (195; 298ಎ, 4X16, 6X2) ಎಡವಿ ನಿರಾಸೆ ಅನುಭವಿಸಿದರು.

ಒಡಿಶಾ ತಂಡದ 468 ರನ್‌ಗೆ ಉತ್ತರವಾಗಿ ಬರೋಡಾ ಮೂರನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 218 ರನ್ ಗಳಿಸಿದ್ದು, ಹಿನ್ನಡೆ ಅನುಭವಿಸಿದೆ.

ಸಂಕ್ಷಿಪ್ತ ಸ್ಕೋರ್:
ಎಸ್‌ಜೆಸಿಇ ಮೈದಾನ: ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 106.2 ಓವರ್‌ಗಳಲ್ಲಿ 452 ( ಕರ್ಶ್‌ಕೊಠಾರಿ ಔಟಾಗದೆ 61, ಶುಭಾಂಗ್ ಹೆಗ್ಡೆ 133ಕ್ಕೆ 5, ಪಿ. ಧ್ರುವ್ 54ಕ್ಕೆ 2).

ಕೆಎಸ್‌ಸಿಎ ಕೋಲ್ಟ್ಸ್: 83 ಓವರ್‌ಗಳಲ್ಲಿ 6 ವಿಕೆಟ್‌ಗೆ 298 ( ಎಸ್.ಯು ಕಾರ್ತಿಕ್ 57, ಹರ್ಷಿಲ್ 118, ಸೃಜನ್ ನಂದನ್ 49. ಪರೀಕ್ಷಿತ್ 76ಕ್ಕೆ 2)

ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ: ಒಡಿಶಾ ಕ್ರಿಕೆಟ್ ಸಂಸ್ಥೆ: 129 ಓವರ್‌ಗಳಲ್ಲಿ 468 ( ಗೋವಿಂದ ಪೊದ್ದಾರ್ 195, ಬಾಬಾಸಫಿ ಪಠಾಣ್ 108ಕ್ಕೆ 5).

ಬರೋಡಾ ಕ್ರಿಕೆಟ್ ಸಂಸ್ಥೆ: 78 ಓವರ್‌ಗಳಲ್ಲಿ 5 ವಿಕೆಟ್‌ಗೆ 218 ( ಕೇದಾರ್ ದೇವಧರ್ 68, ಸುಕೀರ್ತ್ ಪಾಂಡೆ ಔಟಾಗದೆ 81. ಸೂರ್ಯಕಾಂತ್ ಪ್ರಧಾನ್ 17ಕ್ಕೆ 2, ಸುಮಿತ್ ಶರ್ಮ 69ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.