ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs NZ Test | ಅಲೆಕ್ಸ್‌ ಕ್ಯಾರಿ ಸಾಹಸ: ಆಸ್ಟ್ರೇಲಿಯಾಕ್ಕೆ ಜಯ

Published 11 ಮಾರ್ಚ್ 2024, 14:06 IST
Last Updated 11 ಮಾರ್ಚ್ 2024, 14:06 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್‌: ವಿಕೆಟ್ ಕೀಪರ್– ಬ್ಯಾಟರ್ ಅಲೆಕ್ಸ್‌ ಕ್ಯಾರಿ ಅವರ ಅಜೇಯ 98 ರನ್‌ಗಳ (123ಎ, 4x15) ನೆರವಿನಿಂದ ಆಸ್ಟ್ರೇಲಿಯಾ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ ಮೇಲೆ ಸೋಮವಾರ ಮೂರು ವಿಕೆಟ್‌ಗಳ ರೊಚಕ ಜಯಪಡೆಯಿತು. ಆ ಮೂಲಕ ಸರಣಿಯನ್ನು 2–0 ಯಿಂದ ಸ್ವೀಪ್ ಮಾಡಿಕೊಂಡಿತು.

ಸರಣಿಯಲ್ಲಿ ಲಯ ಕಂಡುಕೊಳ್ಳಲು ಪರದಾಡಿದ್ದ ಕ್ಯಾರಿ ಮತ್ತು ಮಿಚೆಲ್‌ ಮಾರ್ಷ್‌ (80, 102ಎ, 4x10, 6x1) ಆರನೇ ವಿಕೆಟ್‌ಗೆ 140 ರನ್‌ ಜೊತೆಯಾಟದ ಮೂಲಕ ಆಸ್ಟ್ರೇಲಿಯಾ ತಂಡವನ್ನು ಅಪಾಯದಿಂದ ಪಾರು ಮಾಡಿದರು. 31 ವರ್ಷಗಳ ಬಳಿಕ ತವರು ನೆಲದಲ್ಲಿ ನೆರೆಯ ರಾಷ್ಟ್ರದ ಮೇಲೆ ಜಯ ಗಳಿಸುವ ನ್ಯೂಜಿಲೆಂಡ್ ಆಸೆ ಈಡೇರಲಿಲ್ಲ.

ಕ್ಯಾರಿ ಈ ಇನಿಂಗ್ಸ್‌ಗೆ ಮೊದಲು 3 ಇನಿಂಗ್ಸ್‌ಗಳಿಂದ ಬರೇ 27 ರನ್‌ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ಅಮೋಘ ಆಟ ಮತ್ತು 10 ಕ್ಯಾಚ್ ಪಡೆದು ‘ಪಂದ್ಯದ ಆಟಗಾರ’ನಾದರು. ಸರಣಿಯಲ್ಲಿ 17 ವಿಕೆಟ್ ಪಡೆದ ವೇಗದ ಬೌಲರ್ ಮ್ಯಾಟ್ ಹೆನ್ರಿ ‘ಸರಣಿಯ ಸರ್ವೋತ್ತಮ’ ಎನಿಸಿದರು.

77 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 80 ರನ್‌ ಆಗುವಷ್ಟರಲ್ಲಿ ಟ್ರಾವಿಡ್‌ ಹೆಡ್‌ ಅವರನ್ನು ಕಳೆದುಕೊಂಡಿತು. ಆದರೆ ಕ್ಯಾರಿ ಮತ್ತು ಮಾರ್ಷ್‌ ಹೋರಾಡಿದರು. ಮೊತ್ತ 220 ಆಗಿದ್ದಾಗ ಹೊಸಬ ಬೆನ್‌ ಸಿಯರ್ಸ್‌ ಸತತ ಎಸೆತಗಳಲ್ಲಿ ಮಾರ್ಷ್ ಮತ್ತು ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆದು ಮತ್ತೆ ಕಿವೀಸ್ ತಂಡಕ್ಕೆ ಆಸೆ ಚಿಗುರಿಸಿದರು. ಆಗ ಆಸ್ಟ್ರೇಲಿಯಾಕ್ಕೆ ಮೂರು ವಿಕೆಟ್‌ಗಳಿಂದ 59 ರನ್ ಬೇಕಿತ್ತು. ನಾಯಕ ಕಮಿನ್ಸ್ (ಅಜೇಯ 32), ಕ್ಯಾರಿ ಜೊತೆಗೂಡಿ ಗೆಲುವು ಪೂರೈಸಿದರು.

ಸ್ಕೋರುಗಳು: ಮೊದಲ ಇನಿಂಗ್ಸ್‌: ನ್ಯೂಜಿಲೆಂಡ್‌ 162, ಆಸ್ಟ್ರೇಲಿಯಾ:256; ಎರಡನೇ ಇನಿಂಗ್ಸ್‌: ನ್ಯೂಜಿಲೆಂಡ್‌: 372, ಆಸ್ಟ್ರೇಲಿಯಾ: 65 ಓವರುಗಳಲ್ಲಿ 7 ವಿಕೆಟ್‌ಗೆ 281 (ಮಿಚೆಲ್ ಮಾರ್ಷ್‌ 80, ಅಲೆಕ್ಸ್‌ ಕ್ಯಾರಿ ಔಟಾಗದೇ 98, ಪ್ಯಾಟ್‌ ಕಮಿನ್ಸ್ ಔಟಾಗದೇ 32; ಹೆನ್ರಿ 94ಕ್ಕೆ2, ಸಿಯರ್ಸ್‌ 90ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT