ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

CEAT Awards: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್‌ಗೆ ಪ್ರಶಸ್ತಿ

Published : 22 ಆಗಸ್ಟ್ 2024, 3:14 IST
Last Updated : 22 ಆಗಸ್ಟ್ 2024, 3:14 IST
ಫಾಲೋ ಮಾಡಿ
Comments

ನವದೆಹಲಿ: ಸಿಯೆಟ್‌ ಕಂಪನಿ ನೀಡುವ ಈ ಸಾಲಿನ ಪುರುಷರ ವರ್ಷದ ಅಂತರರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ಭಾರತದ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಪಡೆದುಕೊಂಡಿದ್ದಾರೆ.

ಭಾರತದ ಟೈರ್ ತಯಾರಿಕಾ ಕಂಪನಿ ಸಿಯೆಟ್ ವರ್ಷದ ಕ್ರಿಕೆಟ್‌ (ರೇಟಿಂಗ್ಸ್‌) ಪ್ರಶಸ್ತಿಗಳನ್ನು ಬುಧವಾರ ಪ್ರಧಾನ ಮಾಡಿದೆ.

ಪುರುಷರ ವರ್ಷದ ಅಂತರರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ರೋಹಿತ್‌ ಶರ್ಮಾಗೆ ಕೊಡಲಾಗಿದೆ. ಏಕದಿನ ಪಂದ್ಯಗಳಲ್ಲಿನ ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿ ವಿರಾಟ್ ಕೊಹ್ಲಿ, ವರ್ಷದ ಟಿ20 ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿಯು ಇಂಗ್ಲೆಂಡ್ ತಂಡದ ಫಿಲ್ ಸಾಲ್ಟ್ ಅವರಿಗೆ ನೀಡಲಾಗಿದೆ.

ಮೊಹಮ್ಮದ್ ಶಮಿ ಏಕದಿನ ಬೌಲರ್ ಪ್ರಶಸ್ತಿ, ವರ್ಷದ ಟೆಸ್ಟ್ ಬ್ಯಾಟರ್ ಪ್ರಶಸ್ತಿಗೆ ಯಶಸ್ವಿ ಜೈಸ್ವಾಲ್, ವರ್ಷದ ಟೆಸ್ಟ್ ಬೌಲರ್ ಪ್ರಶಸ್ತಿಯನ್ನು ರವಿಚಂದ್ರನ್ ಅಶ್ವಿನ್ ಅವರಿಗೆ ನೀಡಲಾಗಿದೆ.

ಮಹಿಳಾ ವಿಭಾಗದಲ್ಲಿ ಭಾರತದ ಹರ್ಮನ್​ಪ್ರೀತ್ ಕೌರ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಹಾಗೂ ಸ್ಮೃತಿ ಮಂದಾನ ಅವರಿಗೂ ಪ್ರಶಸ್ತಿಗಳು ಬಂದಿವೆ. 

ಜೀವಮಾನದ ಸರ್ವಶ್ರೇಷ್ಠ ಸಾಧನೆಗಾಗಿ ಟೀಮ್ ಇಂಡಿಯಾದ ಮಾಜಿ ಕೋಚ್‌ ರಾಹುಲ್ ದ್ರಾವಿಡ್ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಹಾಗೂ ಜಯ್ ಶಾ ಅವರಿಗೆ ಶ್ರೇಷ್ಠ ಕ್ರೀಡಾ ಆಡಳಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT