ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS 3RD Test: 6000 ರನ್ ಗಳಿಸಿದ ಚೇತೇಶ್ವರ ಪೂಜಾರ

Last Updated 11 ಜನವರಿ 2021, 4:13 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಸೋಮವಾರ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದ ಆಟದಲ್ಲಿ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸುದ್ದಿಯಾಗಿದ್ದಾರೆ. ಈ ಮಧ್ಯೆ ಅವರಿಗೆ ಉತ್ತಮ ಜತೆಯಾಟ ನೀಡಿರುವ ಟೀಮ್ ಇಂಡಿಯಾದ ಭರವಸೆಯ ಆಟಗಾರ ಚೇತೇಶ್ವರ ಪೂಜಾರ ಕೂಡ ಹೊಸ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ.

6000 ರನ್ ಸರದಾರ

ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಸಿಡ್ನಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಐದನೇ ದಿನದ ಆಟದಲ್ಲಿ ಚೇತೇಶ್ವರ ಪೂಜಾರ, ರಿಷಬ್ ಪಂತ್ ಅವರಿಗೆ ಉತ್ತಮ ಜತೆಯಾಟದ ಆರಂಭ ಒದಗಿಸಿದರು. ಅದರ ಜತೆಗೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 6000 ರನ್ ಗಳಿಕೆಯ ಸಾಧನೆ ಮಾಡಿದ್ದಾರೆ. ಈ ವಿಶೇಷ ಸಾಧನೆಗೈದ 11ನೇ ಭಾರತೀಯ ಆಟಗಾರನಾಗಿ ಚೇತೇಶ್ವರ ಪೂಜಾರ ಹೊರಹೊಮ್ಮಿದ್ದಾರೆ.

ಪೂಜಾರಗೆ ಪ್ರಶಂಸೆ

ಚೇತೇಶ್ವರ ಪೂಜಾರ, ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ 77 ರನ್ ಗಳಿಸಿ ಆಟವಾಡುತ್ತಿದ್ದು, ಟೀಮ್ ಇಂಡಿಯಾ ಗೆಲುವಿನ ಆಸೆಗೆ ನೀರೆರೆದಿದ್ದಾರೆ. ರಿಷಬ್ ಪಂತ್ ಉತ್ತಮ ಆರಂಭ ದೊರಕಿಸಿಕೊಟ್ಟು ಬಳಿಕ ಔಟ್ ಆಗಿದ್ದು, ಪೂಜಾರ ಆಟ ಮುಂದುವರಿಸಿದ್ದಾರೆ. ಪೂಜಾರ ಸಾಧನೆಗೆ ಕ್ರಿಕೆಟ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಟ್ವಿಟರ್ ಮೂಲಕ ಶುಭಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT