ಸೋಮವಾರ, ಮಾರ್ಚ್ 1, 2021
19 °C

IND vs AUS: ಶತಕ ವಂಚಿತ ಗಿಲ್: ಚಹಾ ವಿರಾಮಕ್ಕೆ ಭಾರತ 183/3

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ನಿರ್ಣಾಯಕ ದಿನದ ಆಟದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್(91) ಶತಕವಂಚಿತರಾಗಿದ್ದಾರೆ. ಆರಂಭದಿಂದಲೂ ವೇಗವಾಗಿ ರನ್ ಗಳಿಸುತ್ತಿದ್ದ ಗಿಲ್ ಭಾರತದ ಗುರಿ ತಲುಪುವ ಹಾದಿಯಲ್ಲಿ ದಾಪುಗಾಲಿಟ್ಟಿದ್ದರು. 

146 ಎಸೆತಗಳಲ್ಲಿ 91 ರನ್ ಸಿಡಿಸಿದ್ದ ಗಿಲ್, ನಥನ್ ಲಯೋನ್ ಬೌಲಿಂಗ್‌ನಲ್ಲಿ ಸ್ಮಿತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಶುಭಮನ್ ಗಿಲ್ ಅಮೋಘ ಆಟದಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು.

ನಾಯಕ ಅಜಿಂಕ್ಯ ರಹಾನೆ (24) ರನ್ ಗಳಿಕೆ ವೇಗ ಹೆಚ್ಚಿಸುವ ಯತ್ನದಲ್ಲಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಚಹಾ ವಿರಾಮದ ಹೊತ್ತಿಗೆ ಭಾರತ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಇನ್ನೂ 145 ರನ್ ಅಗತ್ಯವಿದೆ. ಅನುಭವಿ ಚೇತೇಶ್ವರ್ ಪೂಜಾರ(43), ರಿಷಬ್ ಪಂತ್(10) ಕ್ರೀಸ್‌ನಲ್ಲಿದ್ದಾರೆ.

ಅಂತಿಮ ಅವಧಿಯಲ್ಲಿ ಭಾರತ ಎಚ್ಚರಿಕೆ ಆಟ ಆಡಬೇಕಾದ ಅಗತ್ಯವಿದೆ. ರನ್ ಗಳಿಕೆ ಯತ್ನದಲ್ಲಿ ಪಂದ್ಯ ಕೈಚೆಲ್ಲಿದರೆ ಸರಣಿ ಆಸಿಸ್ ಕೈವಶವಾಗಲಿದೆ. 1–1ರಿಂದ ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದು, ಈ ಪಂದ್ಯ ಗೆದ್ದ ತಂಡ ಸರಣಿ ಮುಡಿಗೇರಿಸಿಕೊಳ್ಳಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು