ಮುಂಬೈ: ಕಳೆದ ಗುರುವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ನ ಮುಂಬೈ ಇಂಡಿಯನ್ಸ್– ಎಸ್ಆರ್ಎಚ್ ಪಂದ್ಯ ನೋಡಲು ಬಂದಿದ್ದ ಜಡ್ಜ್ ಒಬ್ಬರು ತಮ್ಮ ಐಫೋನ್ ಕಳೆದುಕೊಂಡಿರುವ ಘಟನೆ ನಡೆದಿದೆ.

ದಕ್ಷಿಣ ಮುಂಬೈನ ಜಿಲ್ಲಾ ನ್ಯಾಯಾಲಯದ ಜಡ್ಜ್ ತಮ್ಮ ಕುಟುಂಬದ ಜೊತೆ ವಾಂಖೆಡೆ ಮೈದಾನಕ್ಕೆ ಬಂದಿದ್ದರು.

ಈ ವೇಳೆ ಅವರು ಗೇಟ್ ನಂಬರ್ 4ರ ಮೂಲಕ ಒಳಗೆ ತೆರಳುತ್ತಿದ್ದರು. ಆಗ ಯಾರೊ ಕಳ್ಳರು ಅವರ ಮೊಬೈಲ್ ಅನ್ನು ಕದ್ದಿರುವ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಭಾನುವಾರ ಪಿಟಿಐಗೆ ತಿಳಿಸಿದ್ದಾರೆ.

ಜಡ್ಜ್, ಮೊಬೈಲ್ ಕಳೆದುಕೊಂಡಿದ್ದರ ಬಗ್ಗೆ ತಕ್ಷಣ ಆನ್ಲೈನ್ ದೂರು ದಾಖಲಿಸಿದ್ದರು. ಪೊಲೀಸರ ಸಲಹೆ ಮೇರೆಗೆ ಬಳಿಕ ಮುಂಬೈನ ಮರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.

ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಮರೈನ್ ಡ್ರೈವ್ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.