ಬುಧವಾರ, ಜನವರಿ 22, 2020
19 °C
ಕ್ರಿಕೆಟ್‌ ಟೂರ್ನಿ

ಸಿ.ಕೆ.ನಾಯ್ಡು ಟ್ರೋಫಿ: ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್‌ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕರ್ನಾಟಕದ ವೇಗ ಮತ್ತು ಸ್ಪಿನ್‌ ದಾಳಿಗೆ ಸಿಲುಕಿದ ಹೈದರಾಬಾದ್‌ 142 ರನ್‌ಗಳಿಗೆ ಕುಸಿಯಿತು. ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ನಾಲ್ಕು ದಿನಗಳ ಪಂದ್ಯವನ್ನು ಕರ್ನಾಟಕ ಅಂತಿಮ ದಿನವಾದ ಶನಿವಾರ ಇನಿಂಗ್ಸ್‌ 66 ರನ್‌ಗಳಿಂದ ಗೆದ್ದುಕೊಂಡಿತು.

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ, 3 ವಿಕೆಟ್‌ಗೆ 71 ರನ್‌ಗಳೊಡನೆ ಎರಡನೇ ಇನಿಂಗ್ಸ್‌ ಮುಂದುವರಿಸಿದ ಹೈದರಾಬಾದ್‌ 142 ರನ್‌ಗಳಿಗೆ ಕುಸಿಯಿತು. ‌ಕರ್ನಾಟಕ 208 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿತ್ತು.

ಆಲ್‌ರೌಂಡರ್‌ ಅಜಯ್‌ ದೇವ್‌ ಗೌಡ ಅಜೇಯ 44 ರನ್‌ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಪ್ರತಿರೋಧ ಎದುರಾಗಲಿಲ್ಲ. ಮಧ್ಯಮ ವೇಗದ ಬೌಲರ್‌ ಸಂತೋಖ್‌ ಸಿಂಗ್‌ 33 ರನ್ನಿಗೆ 3 ವಿಕೆಟ್‌ ಪಡೆದರೆ, ಆಫ್ ಸ್ಪಿನ್ನರ್‌ ಅಭಿಷೇಕ್‌ ಅಹ್ಲಾವಟ್‌ 26 ರನ್ನಿಗೆ3 ವಿಕೆಟ್‌ ಪಡೆದರು. ಎಡಗೈ ಸ್ಪಿನ್ನರ್‌ ಪ್ರಣವ್ ಭಾಟಿಯಾ ಎರಡು ವಿಕೆಟ್‌ ಪಡೆದರು.

ಸ್ಕೋರುಗಳು
ಹೈದರಾಬಾದ್‌: 202 ಮತ್ತು 63.1 ಓವರುಗಳಲ್ಲಿ 142
(ಬುದ್ಧಿ ರಾಹುಲ್‌ 26, ಅಜಯ್‌ ದೇವ್‌ ಗೌಡ್‌ ಔಟಾಗದೇ 44; ಅಭಿಲಾಷ್‌ ಶೆಟ್ಟಿ 21ಕ್ಕೆ2, ಸಂತೋಖ್‌ ಸಿಂಗ್‌ 33ಕ್ಕೆ3, ಅಭಿಷೇಕ್‌ ಅಹ್ಲಾವಟ್‌ 26ಕ್ಕೆ3, ಪ್ರಣವ್‌ ಭಾಟಿಯಾ 19ಕ್ಕೆ2)
ಕರ್ನಾಟಕ ಮೊದಲ ಇನಿಂಗ್ಸ್‌ 410

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು