ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಅನುಭವಿ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅವರನ್ನು ಯಾವ ತಂಡವೂ ಖರೀದಿಸಲಿಲ್ಲ!
ಶನಿವಾರ ಇಲ್ಲಿ ಆರಂಭವಾದ ಪ್ರಕ್ರಿಯೆಯಲ್ಲಿ ಪೂಲ್ ‘ಎ’ ಗುಂಪಿನಲ್ಲಿ ಪಾಂಡೆ ಇದ್ದರು. ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಭಾರತ ಏಕದಿನ ತಂಡದಲ್ಲಿ ಪಾಂಡೆ ಸ್ಥಾನ ಪಡೆದಿದ್ದಾರೆ. ಆಗಸ್ಟ್ 16ರಂದು ಆರಂಭವಾಗುವ ಕೆಪಿಎಲ್‌ನಲ್ಲಿ ಅವರು ಲಭ್ಯವಿರುವುದಿಲ್ಲ. ಆದ್ದರಿಂದ ಫ್ರ್ಯಾಂಚೈಸ್‌ಗಳೂ ಒಲವು ತೋರಲಿಲ್ಲ.
ಮೊದಲ ಒಂದು ತಾಸಿನ ಅವಧಿಯಲ್ಲಿ ನಡೆದ ಬಿಡ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್ ಪವನ್ ದೇಶಪಾಂಡೆ ₹7.30 ಲಕ್ಷ ಮೌಲ್ಯ ಪಡೆದರು. ಪ್ರತೀಕ್ ಜೈನ್ ₹4.50 ಲಕ್ಷ ಪಡೆದರು.