ಭಾನುವಾರ, ಮಾರ್ಚ್ 26, 2023
31 °C

ಕ್ರಿಕೆಟ್ ಪರ ಇದೆ ಮ್ಯಾಂಚೆಸ್ಟರ್ ಹವಾಮಾನ: 3ಕ್ಕೆ ಪಂದ್ಯ ಆರಂಭವಾಗುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯಾಂಚೆಸ್ಟರ್: ಮಳೆರಾಯ ಕೃಪೆ ತೋರಿರುವ ಕಾರಣ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಬಾಕಿ ಆಟ ಇಂದು ಪುನಃ ಆರಂಭವಾಗುವ ನಿರೀಕ್ಷೆಯಿದೆ. ಬುಧವಾರ ಮುಂಜಾನೆ ಮ್ಯಾಂಚೆಸ್ಟರ್‌ನಲ್ಲಿ ಆಗಸ ಶುಭ್ರವಾಗಿದೆ, ಅಲ್ಲಲ್ಲಿ ಮೋಡಗಳು ತೇಲುತ್ತಿವೆ. ಅದರೆ ದಟ್ಟೈಸಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಳೆಯಿಂದಾಗಿ ಅರ್ಧ ನಡೆದ ಪಂದ್ಯ ಇಂದು ಮುಂದುವರಿಯಲಿದೆ


Courtesy- www.accuweather.com

ಅಕ್ಯುವೆದರ್ ಸೇರಿದಂತೆ ಹವಾಮಾನ ಮುನ್ಸೂಚನೆ ನೀಡುವ ಹಲವು ವೆಬ್‌ಸೈಟ್‌ಗಳಲ್ಲಿ ಇದೇ ಮಾಹಿತಿ ಕಾಣಿಸುತ್ತಿದೆ. ಬುಧವಾರ ರಾತ್ರಿ ಭಾರಿ ಮಳೆ ಸುರಿಯಬಹುದು ಎನ್ನುವ ಹವಾಮಾನ ಮುನ್ಸೂಚನೆಯನ್ನು ಕೆಲ ವೆಬ್‌ಸೈಟ್‌ಗಳು ನೀಡಿವೆ.

ಈವರೆಗೆ ಮಳೆ ಆರಂಭವಾಗಿಲ್ಲ. ಹೀಗಾಗಿ ನಿಗದಿತ ಸಮಯಕ್ಕೆ ಪಂದ್ಯಗಳು ಆರಂಭವಾಗಬಹುದು. ಭಾರತ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಮಳೆ ಎದುರಿಸಲು ಐಸಿಸಿ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಹರಿಹಾಯ್ದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇನ್ನಷ್ಟು...

ಮಳೆಯಿಂದ ನಿಂತ ಪಂದ್ಯ; ಶುರುವಾದರೆ 20 ಓವರ್‌ಗಳಲ್ಲಿ ಭಾರತ‌ಕ್ಕೆ148 ರನ್‌ ಗುರಿ?​

ಏನಿದು ಡಕ್ವರ್ಥ್ ಲೂಯಿಸ್ ನಿಯಮ? ಕ್ರಿಕೆಟ್ ಪ್ರೇಮಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ​

19 ವರ್ಷದೊಳಗಿನವರ ವಿಶ್ವಕಪ್ ‘ಸೆಮಿ’ಯಲ್ಲಿ ವಿಲಿಯಮ್ಸನ್ ವಿಕೆಟ್ ಪಡೆದಿದ್ದ ವಿರಾಟ್

ವಿಶ್ವಕಪ್‌ ಫೈನಲ್‌ಗೆ ಎರಡು ಪಂದ್ಯ ಬಾಕಿ; ಪಾಯಿಂಟ್‌ ಪಟ್ಟಿಯಲ್ಲಿ ಭಾರತ ನಂ.1

ಟೀಂ ಇಂಡಿಯಾದ ಕೂಲ್‌ ಮ್ಯಾನ್‌ ಮಹೇಂದ್ರ ಸಿಂಗ್‌ ಧೋನಿ; ಸಾಧನೆ ಇಂದಿಗೂ ಜೀವಂತ!

ಫೈನಲ್‌ಗೆ ಭಾರತ–ಇಂಗ್ಲೆಂಡ್ | ನಿಜವಾಗುತ್ತಾ ಗೂಗಲ್ ಸಿಇಒ ಭವಿಷ್ಯ

ಬದಲಾದ ಬ್ಯಾಟು ಹೇಳುತ್ತಿದೆಯಾ ಧೋನಿ ವಿದಾಯದ ಮುನ್ನುಡಿ?!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು