ಸೋಮವಾರ, ಜೂನ್ 1, 2020
27 °C

ದಕ್ಷಿಣ ಆಫ್ರಿಕಾ ಆಟಗಾರರಿಗೆ ವೇತನ ಕಡಿತವಿಲ್ಲ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ತಂಡದ ಕ್ರಿಕೆಟ್‌ ಆಟಗಾರರಿಗೆ 2020–21ನೇ ಸಾಲಿನ ವೇತನದಲ್ಲಿ ಕಡಿತ ಮಾಡುವುದಿಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕಸ್ ಫಾಲ್ ತಿಳಿಸಿದ್ದಾರೆ.

‘ವಾರ್ಷಿಕ ಗುತ್ತಿಗೆಯಲ್ಲಿರುವ ಆಟಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಮ್ಮ ವೇಳಾಪಟ್ಟಿಯೂ ಹೆಚ್ಚು ಅಸ್ತವ್ಯಸ್ತವಾಗುವುದಿಲ್ಲ. ನಾವು ಈಗಾಗಲೇ ಬಜೆಟ್ ಸಿದ್ಧಪಡಿಸಿದಂತೆಯೇ ನಿರ್ವಹಿಸಲು ಶಕ್ತರಾಗಿದ್ದೇವೆ. ನಮ್ಮದು ಕೇಂದ್ರಿಕೃತ ವ್ಯವಸ್ಥೆಯಾಗಿದೆ. ರಾಷ್ಟ್ರೀಯ ಮತ್ತು ಫ್ರ್ಯಾಂಚೈಸ್‌ಗಳ ಆಟಗಾರರಿಗೆ ಯಾವುದೇ ಕಡಿತದ ಭೀತಿ ಇಲ್ಲ’ ಎಂದು ಮಂಗಳವಾರ ಫಾಲ್ ತಿಳಿಸಿದ್ದಾರೆ.

ಬಾಂಗ್ಲಾ ಆಟಗಾರ್ತಿಯರಿಗೆ ಭತ್ಯೆ (ಪಿಟಿಐ): ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ದೇಶದ ತಂಡದ ಆಟಗಾರ್ತಿಯರಿಗೆ ಭತ್ಯೆಯನ್ನು ಮಂಜೂರು ಮಾಡಿದೆ.  20 ಸಾವಿರ ಟಕಾವನ್ನು ಒಂದು ಸಲ ಪಾವತಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು