ಭಾರತದ ಆಲ್‌ರೌಂಡರ್ ವಿಜಯ್ ಶಂಕರ್ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಗುರುವಾರ ಘೋಷಿಸಿದ್ದಾರೆ.
ಶಂಕರ್ ತನ್ನ ಪ್ರೇಯಸಿ ವೈಶಾಲಿ ವಿಶ್ವೇಶ್ವರನ್ ಅವರೊಂದಿಗಿರುವ ಎರಡು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ರಿಂಗ್ ಎಮೋಜಿಯೊಂದಿಗೆ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಇದೇ ವೇಳೆ ಕ್ರಿಕೆಟ್ ತಾರೆಯರಾದ ಕೆ.ಎಲ್. ರಾಹುಲ್, ಯಜುವೇಂದ್ರ ಚಾಹಲ್ ಮತ್ತು ಶ್ರೇಯಸ್ ಅಯ್ಯರ್ ಅವರು ವಿಜಯ್ ಶಂಕರ್ ಅವರಿಗೆ ಶುಭ ಕೋರಿದ್ದಾರೆ.
2019ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿದ್ದ ವಿಜಯ್ ಶಂಕರ್ ಅವರನ್ನು ಕರುಣ್ ನಾಯರ್, ಅಭಿನವ್ ಮುಕುಂದ್ ಮತ್ತು ಜಯಂದ್ ಯಾದವ್ ಕೂಡ ಅಭಿನಂದಿಸಿದ್ದಾರೆ.
'ಅಭಿನಂದನೆಗಳು ಬ್ರೋ,' ಎಂದು ಕೆ.ಎಲ್. ರಾಹುಲ್ ಶಂಕರ್ ಅವರ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಶಂಕರ್, ಧನ್ಯವಾದ ಹೇಳಿದ್ದಾರೆ.
ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 2018ರಲ್ಲಿ ಶಂಕರ್ ಅವರು ಭಾರತ ಪರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅದಾದ ಒಂದು ವರ್ಷದ ನಂತರ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ಅವರು ಅಂತರರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.
ಶಂಕರ್ ಅವರು ಭಾರತಕ್ಕಾಗಿ 12 ಏಕದಿನ ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಆಡಿದ್ದಾರೆ. ಭಾರತ ತಂಡದ ಭಾಗವಾಗಿ 2019ರ ಐಸಿಸಿ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳಲು ಅವರನ್ನು ಆಯ್ಕೆ ಮಾಡಲಾಯಿತು.
ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮುಂಬರುವ ಆವೃತ್ತಿಯಲ್ಲಿ ವಿಜಯ್ ಶಂಕರ್ ಸನ್ ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ. ಐಪಿಎಲ್‌ನ 13ನೇ ಆವೃತ್ತಿಗೂ ಮುನ್ನ ವಾರಾಂತ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹಾರಲು ಸಜ್ಜಾಗಿದೆ.
ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ವರ್ಷ ಐಪಿಎಲ್ ಮುಂದೂಡಲ್ಪಟ್ಟಿದ್ದ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 19 ರಂದು ಪಂದ್ಯಾವಳಿ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.