ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಸ್‌ಕೆಯಿಂದ ನೀರಜ್‌ಗೆ ಒಂದು ಕೋಟಿ ಬಹುಮಾನ

Last Updated 31 ಅಕ್ಟೋಬರ್ 2021, 12:09 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರ್ಯಾಂಚೈಸಿಯು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಥ್ಲೀಟ್‌ ನೀರಜ್ ಚೋಪ್ರಾ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಿ ಗೌರವಿಸಿದೆ.

ಒಲಿಂಪಿಕ್ಸ್‌ನಲ್ಲಿ ನೀರಜ್ 87.58 ಮೀಟರ್ಸ್ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದಿದ್ದರು. ಅದರ ಸವಿನೆನಪಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಮತ್ತು 8758 ಸಂಖ್ಯೆಯು ಅಚ್ಚಾಗಿರುವ ಜೆರ್ಸಿಯನ್ನು ಚೆನ್ನೈ ತಂಡವು ನೀರಜ್ ಅವರಿಗೆ ಕಾಣಿಕೆ ನೀಡಿದೆ.

‘ನೀರಜ್ ಸಾಧನೆಗೆ ಇಡೀ ದೇಶವೇ ಹೆಮ್ಮೆಪಟ್ಟಿದೆ. ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಚಿನ್ನದ ಪದಕ ಗಳಿಸಿದ ಮೊದಲ ಭಾರತೀಯ ಅಥ್ಲೀಟ್ ಅವರಾಗಿದ್ದಾರೆ. ಅವರು ಒಂದು ಮೈಲುಗಲ್ಲು ನಿರ್ಮಿಸಿದ್ದಾರೆ. ಅವರ ಸಾಧನೆಯು ಅಭೂತಪೂರ್ವವಾದದ್ದು. ಅವರನ್ನು ಗೌರವಿಸುವ ಮೂಲಕ ನಮ್ಮನ್ನು ನಾವೇ ಸತ್ಕರಿಸಿಕೊಂಡಿದ್ದೇವೆ’ ಎಂದು ಸಿಎಸ್‌ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ವಿಶ್ವನಾಥ್ ಹೇಳಿದ್ದಾರೆ.

ಗೌರವ ಸ್ವೀಕರಿಸಿದ 23 ವರ್ಷದ ನೀರಜ್, ‘ಚಿನ್ನ ಗೆದ್ದಿರುವುದರಿಂದ ನನಗೆ ಸಿಗುತ್ತಿರುವ ಪ್ರೀತಿ, ಗೌರವಗಳಿಗೆ ಪುಳಕಿತನಾಗಿದ್ದೇನೆ. ಇದೊಂದು ಹಿತಾನುಭವವಾಗಿದೆ. ಚೆನ್ನೈ ತಂಡದ ಗೌರವಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಶ್ರಮದಿಂದ ಅಭ್ಯಾಸ ಮಾಡಲು ಪ್ರೇರಣೆಯಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT